ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಕರಿಯಪ್ಪ ಕೆ.ವಿಜಯಲಕ್ಷ್ಮಿ ಈ ದಂಪತಿಗಳ 33ನೇ ವರ್ಷದ ವಿವಾಹ ವಾರ್ಷಿಕೋತ್ಸವ ಭಾವನಾತ್ಮಕ ಸಂಭ್ರಮಗಳಿಂದ ನೆರವೇರಿತು.ಇದೇ ಕಾರ್ಯಕ್ರಮದಲ್ಲಿ ಮಾನ್ವಿ ಸಮಾಜ ಕಲ್ಯಾಣ ಅಧಿಕಾರಿಗಳಾದ ಹನುಮಂತಪ್ಪ ಮೀನಾಕುಮಾರಿ ಮತ್ತು ಸಿಂಧನೂರು ತಾಲೂಕ ಆಸ್ಪತ್ರೆಯ ಸಿಬ್ಬಂದಿಯಾದ ಬಾಬು ಮತ್ತು ಯಂಕಮ್ಮ ಅಡಿವೆಪ್ಪ ಚಲವಾದಿ ಅಂಕಲಿಮಠ(ತಲೆಕಟ್ಟು) ಈ ದಂಪತಿಗಳ ಮಗಳಾದ ಕು.ದಿ.ಪಲ್ಲವಿ ಅವರ ಹುಟ್ಟುಹಬ್ಬ ಕಾರ್ಯಕ್ರಮಗಳ ಅಡಿಯಲ್ಲಿ “ಕರುಣೆಯ ಕಂಪನ” ಕಾರ್ಯಕ್ರಮ ನೆರವೇರಿತು.ಈ ಕಾರ್ಯಕ್ರಮದಲ್ಲಿ ಆಶ್ರಮದ ವತಿಯಿಂದ ಶ್ರೀಮತಿ ವಿಜಯಲಕ್ಷ್ಮಿ ಕೆ ಕರಿಯಪ್ಪ ಶ್ರೀಮತಿ ಮೀನಾ ಕುಮಾರಿ ಶ್ರೀ ಹನುಮಂತಪ್ಪ ಬಾಬು ಆರೋಗ್ಯ ಇಲಾಖೆ ಇವರುಗಳನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಕರಿಯಪ್ಪ ಮಾತನಾಡಿ ನಮ್ಮ ಸಿಂಧನೂರಿನ ಕಾರುಣ್ಯ ಆಶ್ರಮಕ್ಕೆ ಸರ್ಕಾರದ ಸೌಲಭ್ಯ ಅನುದಾನವನ್ನು ಒದಗಿಸುವ ನಿರಂತರ ಪ್ರಯತ್ನ ನನ್ನಿಂದ ಹಾಗೂ ನಮ್ಮ ಅಭಿಮಾನಿಗಳು ಪಕ್ಷದಿಂದ ನಡೆಯುತ್ತಿದೆ.ಈ ಚುನಾವಣೆಯಲ್ಲಿ ಜನ ಆಶೀರ್ವಾದದಿಂದ ನಾನೇನಾದರೂ ಆಯ್ಕೆಯಾಗಿದ್ದರೆ ಮೊದಲನೇ ಕಾರ್ಯ ಕರುಣಾಮಯಿ ಸಿಂಧನೂರು ಎನ್ನುವುದನ್ನು ತೋರಿಸಿ ಕೊಡಬಹುದಿತ್ತು. ಅಧಿಕಾರವಿರಲಿ ಬಿಡಲಿ ಯಾವತ್ತಿಗೂ ಕೂಡ ನಾವು ಹಿರಿಯರನ್ನು ಗೌರವಿಸುವಂತಹ ನಮ್ಮ ಕೊಂತನೂರು ಕುಟುಂಬ ಕಾರುಣ್ಯ ಆಶ್ರಮಕ್ಕೆ ಬೆನ್ನೆಲುಬಾಗಿರುತ್ತದೆ ಈ ಆಶ್ರಮದ ಎಲ್ಲಾ ಕಷ್ಟ ಕಾರ್ಪಣ್ಯಗಳು ಚನ್ನಾಗಿ ಅರಿತಿದ್ದೇನೆ ಈ ಆಶ್ರಮ ನಮ್ಮ ಕೊಂತನೂರು ಕುಟುಂಬದ ದೃಷ್ಟಿಯಲ್ಲಿ ನಮ್ಮ ಸ್ವಂತ ಕುಟುಂಬದಂತಾಗಿದೆ ಸರ್ಕಾರದ ಗಮನಕ್ಕೆ ತರುವ ಎಲ್ಲಾ ಪ್ರಯತ್ನಗಳಲ್ಲಿ ನಾನು ನಿರಂತರವಾಗಿರುತ್ತೇನೆ. ಜಂಗಮ ಎನ್ನುವ ಪದಕ್ಕೆ ಸಂಪೂರ್ಣ ಅರ್ಥ ನೀಡಿರುವ ಈ ಕಾರುಣ್ಯ ಆಶ್ರಮ ನಮ್ಮ ಭಾರತೀಯ ಕರುಣಾಮಯಿ ಸಂಸ್ಕೃತಿಯನ್ನು ನಮ್ಮ ನಾಡಿಗೆ ತೋರಿಸಿಕೊಟ್ಟಿದೆ.ಈ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಫೋನ್ ಗಳಲ್ಲಿ ನೋಡುವುದರ ಮೂಲಕ ಸಹಾಯ ಮಾಡುವ ಜನ ಈ ಕುಟುಂಬದಲ್ಲಿ ನಡೆಯುವ ಸತ್ಯಸೇವೆಗೆ ಸಹಾಯ ಸಹಕಾರ ಮಾಡಿ ಎಂದು ನಮ್ಮ ಸಿಂಧನೂರಿನ ಜನತೆಯಲ್ಲಿ ವಿನಯ ಪೂರ್ವಕ ವಿನಂತಿ ಮಾಡಿಕೊಳ್ಳುತ್ತೇನೆ. ಇಂದು ಆಶೀರ್ವಾದ ಮಾಡಿದಂತ ಆಶ್ರಮದ ಎಲ್ಲಾ ಆಶ್ರಯದಾತ ದೇವರುಗಳಿಗೆ ನನ್ನ ಕುಟುಂಬದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಎಂದು ಭಾವನಾತ್ಮಕವಾಗಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರ ಮಠ. ಅಮರೇಶಪ್ಪ ಮೈಲಾರ. ವೀರಭದ್ರಗೌಡ ಇಂಜಿನಿಯರ್. ಅರುಣ್ ಕುಮಾರ್ ಗುರುದೇವ್ ಹೋಟೆಲ್. ಮಲ್ಲಪ್ಪ ಮಾಡಿಗಿರಿ. ಹೊಸಗೇರಪ್ಪ ಗೊರೆಬಾಳ. ಶಿವಶರಣಯ್ಯ ಸ್ವಾಮಿ.. ಆಶ್ರಮದ ಸಿಬ್ಬಂದಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಇಂದುಮತಿ ಏಕನಾಥ. ಮರಿಯಪ್ಪ ಶರಣಮ್ಮ. ಯಂಕಯ್ಯ ಶ್ರೇಷ್ಠಿ ಅನೇಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.