ಮೈಸೂರು:ಹಿರಿಯ ಚಲನಚಿತ್ರ ಹಾಸ್ಯ ಕಲಾವಿದ ರತ್ನಾಕರ ಅವರ ಹೆಸರನ್ನು ಮೈಸೂರಿನ ರಾಮಾನುಜ ರಸ್ತೆಯ ಉದ್ಯಾನ ವನಕ್ಕೆ ನಾಮಕರಣ ಮಾಡಬೇಕೆಂದು ಕನ್ನಡಪರ ಹೋರಾಟಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮೈಸೂರಿನ ಮಗ ಹಾಸ್ಯ ಕಲಾವಿದ ರತ್ನಾಕರ್ ರವರ ಕೊಡುಗೆ ಅಪಾರವಾದದ್ದು.
ಅವರು ಮೈಸೂರಿನ ರಾಮಾನುಜ ರಸ್ತೆಯಲ್ಲಿ ವಾಸವಾಗಿದ್ದುದು ಎಲ್ಲರಿಗೂ ತಿಳಿದಿರುವ ವಿಷಯ.ಅವರು ವಿಧಿವಶರಾಗಿ ಹತ್ತಾರು ವರುಷಗಳೇ ಕಳೆದಿದೆ.ರಾಮಾನುಜ ರಸ್ತೆಯಲ್ಲಿ 3/4 ಉದ್ಯಾನವನಗಳು ಇದ್ದರೂ ಸಹ ಅವರ ಹೆಸರನ್ನು ನಾಮಕರಣ ಮಾಡಲೇ ಇಲ್ಲ ಎಂದು ತೇಜಸ್ವಿ ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಹಿರಿಯ ಚಲನಚಿತ್ರ ಕಲಾವಿದರಿಗೆ ಸಂಭಂದ ಪಟ್ಟ ಅಧಿಕಾರಿಗಳು ಮತ್ತು ನಗರ ಪಾಲಿಕೆ ಸದಸ್ಯರು ಅಪಮಾನ ಮಾಡಿದ್ದಾರೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ರತ್ನಾಕರ್ ರವರ ಹೆಸರನ್ನು ಒಂದು ಉದ್ಯಾನವನಕ್ಕೆ ನಾಮಕರಣ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನೆ ಮಾಡುವುದಾಗಿ ತೇಜಸ್ವಿ ಎಚ್ಚರಿಕೆ ನೀಡಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.