ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದಿಂದ ರಾಜಾ ವೆಂಕಟಪ್ಪ ನಾಯಕ ಅವರು ಗೆದ್ದು ಬಂದರೆ ಪೇಠ ಅಮ್ಮಾಪುರ ಗ್ರಾಮದಿಂದ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಬರುತ್ತೇನೆ ಎಂದು ಹರಕೆ ಹೊತ್ತಿದ್ದ ಕಾಂಗ್ರೆಸ್ ಯುವ ಮುಖಂಡ ಮಹೇಶ್ ಯಾದವ್ ಮತ್ತು ಸನ್ನಿ ಯಾದವ್,ಹಣಮೇಶ ಯಾದವ್,ಭೀಮು ಯಾದವ್,ವೆಂಕಣ್ಣ ಯಾದವ್,ನಿಂಗು ಕಾಕನರ,ಬೈಲು ಯಾದವ್ ಯಮನಪ್ಪ ಕಟ್ಟಿಮನಿ,ಬಸು ಜೆ.ಎಸ್.ಆರ್ ಹಾಗೂ ಆರ್.ವಿ.ಎನ್. ಹಾಗೂ ವಿಠ್ಠಲ್ ಯಾದವ್ ಅಭಿಮಾನಿಗಳು ಇಂದು ಲಿಂಗಸೂಗೂರ ತಾಲುಕಿಗೆ ತಲುಪಿದ್ದು ಇಲ್ಲಿನ ಯುವಕರು ಮತ್ತು ಗೆಳೆಯರ ಬಳಗದವರು ಅವರಿಗೆ ಹಣ್ಣು ಹಂಪಲು ನೀಡಿ ಅವರಿಗೆ ಸ್ವಾಗತ ಕೋರಿ ಮತ್ತೆ ಮುಂದಿನ ಪಯಣ ಸುಖಕರವಾಗಿರಲಿ ಎಂದು ಶುಭಕೋರಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಕರುನಾಡ ಕಂದ ಪತ್ರಿಕೆಯೊಂದಿಗೆ ಮಾತನಾಡಿ ಈ ಬಾರಿಯೂ ಚುನಾವಣೆಯಲ್ಲಿ ನಮ್ಮ ಆರ್ ವಿ ಎನ್ ಅವರು ಅತೀ ಹೆಚ್ಚು ಮತಗಳ ಅಂತರದಿಂದ ಜಯಶಾಲಿಯಾಗಿ ವಿಧಾನಸಭೆಗೆ ಪ್ರವೇಶಿಸಲಿ ಎಂದು ಚುನಾವಣೆ ಪೂರ್ವದಲ್ಲಿ ಹರಕೆ ಹೊತ್ತಿದ್ದು ಆ ಹರಕೆ ಫಲಿಸಿದೆ ಎಂದು ಖುಷಿ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಲಿಂಗಸೂರಿನ ಯುವಕರ ಬಳಗದ ವೀರೇಶ್ ಹಿರೇಮಠ,ಪ್ರವೀಣಕುಮಾರ್, ಪ್ರಶಾಂತಕುಮಾರ,ಅಮೀರ್ ಸರ್ ಹಾಗೂ ಗೆಳೆಯರು ಉಪಸ್ಥಿತರಿದ್ದರು.
ವರದಿ:ಪುನೀತಕುಮಾರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.