ರಾಯಚೂರು ಜಿಲ್ಲೆ ಲಿಂಗಸೂಗೂರ ತಾಲ್ಲೂಕಿನಲ್ಲಿ ಚಿಕ್ಕಹೇಸರೂರು ಗ್ರಾಮದಲ್ಲಿ ಪರಿಸರ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಸಸಿ ನೆಟ್ಟು ವಿಶ್ವ ಪರಿಸರ ದಿನಾಚರಣೆಯ ಆಚರಿಸಲಾಯಿತು ವಿಶ್ವ ಪರಿಸರ ದಿನ ಬಂತು ಎಂದರೆ ಮೊದಲು ನೆನಪಾಗೋದು ಸಾಲುಮರದ ತಿಮ್ಮಕ್ಕ ಅಜ್ಜಿ ಅಂತ ನೇ ಹೇಳಬಹುದು ಯಾಕಂದ್ರೆ ಈ ಪ್ರಪಂಚದಲ್ಲಿ ಬರಿ ದುಡ್ಡಿಗಾಗಿ ದುಡ್ಡಿಗೋಸ್ಕರನೇ ಓಡ್ತಾ ಇರುವ ಪ್ರಪಂಚ ಅಂತದರಲ್ಲಿ ಸಸಿಗಳನ್ನು ನೆಟ್ಟು ಅದರ ಪಾಲನೆ, ಪೋಷಣೆ ಮಾಡಿ ಸ್ವಂತ ಮಕ್ಕಳ್ಳಂತೆ ಬೆಳಿಸಿದ್ದಾರೆ ಸಾಲುಮರದ ತಿಮ್ಮಕ್ಕ ಅವರು ನಮಗೆಲ್ಲ ಸ್ಫೂರ್ತಿ ಎಂದು ಹೇಳಿದರು
ನಾವು ಅರಣ್ಯ ಸಂರಕ್ಷಣ ಜೊತೆಗೆ ಸಸಿ ಗಳನ್ನು ನೆಟ್ಟು ಪೋಷಣೆ ಮಾಡುವ ಮೂಲಕ
ಪರಿಸರದ ಅಸಮತೋಲನ ಹೋಗಲಾಡಿಸಬೇಕು ಇಲ್ಲದಿದ್ದರೆ ನಾವು ಇಂದು ಮಾಡುವ ಅರಣ್ಯ ನಾಶ ಮತ್ತು ಪರಿಸರ ನಾಶದ ದುಷ್ಪರಿಣಾಮವನ್ನು ಮುಂದಿನ ಪೀಳಿಗೆ ಎದರಿಸಬೇಕಾಗುತ್ತದೆ ಎಂದು ಮುಖ್ಯ ಗುರುಗಳು ತಿಳಿಸಿದರು
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಚಿಕ್ಕಹೆಸರೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಸಸಿ ನೆಟ್ಟು ನೀರು ಹಾಕುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಮನುಷ್ಯರಾದ ನಾವು ನಮ್ಮ ಅಭಿವೃದ್ಧಿಗಾಗಿ ಪರಿಸರದ ಮೇಲೆ ನಿರಂತರ ದಬ್ಬಾಳಿಕೆ ಮಾಡುತ್ತಿದ್ದೇವೆ ಇದರಿಂದ ಮುಂದಿನ ದಿನಗಳಲ್ಲಿ ಮನುಷ್ಯ ಸೇರಿದಂತೆ ಜಗತ್ತಿನ ಎಲ್ಲಾ ಜೀವರಾಶಿಗಳ ಮೇಲೆ ಗಂಡಾಂತರವನ್ನು ಎದರಿಸುವ ಅಪಾಯವಿದೆ ಅದಕ್ಕಾಗಿ ನಾವು ಕಾಡು ಕಡಿಯುವುದನ್ನು ನಿಲ್ಲಿಸಬೇಕು ಹೆಚ್ಚಿನ ರೀತಿಯಲ್ಲಿ ಸಸಿಯನ್ನು ನೇಟ್ಟು ಪರಿಸರ ಸಂರಕ್ಷಣೆ ಮಾಡಬೇಕಾದ ಕರ್ತವ ನಮ್ಮೆಲ್ಲರ ಮೇಲಿದೆ ತುರ್ತಾಗಿ ಪರಿಸರ ಸಂರಕ್ಷಣೆಯನ್ನ ನಾವು ಮಾಡಬೇಕಾದ ಅಗತ್ಯವಿದೆ ಪ್ರತಿಯೊಬ್ಬರೂ ಒಂದೊಂದು ಸಸಿ ನೆಡುವ ಮೂಲಕ ಜಾಗತಿಕ ತಾಪಮಾನವನ್ನು ಕಡಿಮೆ ಮಾಡಿ ಜೀವ ರಾಶಿಗಳ ಸಂರಕ್ಷಣೆ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು ಮತ್ತು ಸಸಿಯನ್ನು ನೆಡುವ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು ಈ ಸಂದರ್ಭದಲ್ಲಿ
ಮುಖ್ಯ ಗುರುಗಳಾದ ಶರಣಗೌಡ
ಸಹ ಶಿಕ್ಷಕರಾದ ಮಲ್ಲಿಕಾರ್ಜುನ,
ಮಲ್ಲಿಕಾರ್ಜುನ,ಗುಂಡಪ್ಪ,ಸಾವಿತ್ರಿಬಾಯಿ, ಪುಷ್ಪ,ಸರಿತಾ,ಶೋಭಾ,ಶಾಂತಕುಮಾರ ಪಟ್ಟೆದ ಮತ್ತು
ವಿದ್ಯಾರ್ಥಿಗಳು ಭಾಗಿಯಾಗಿದ್ದರು.
-ಪುನೀತ ಕುಮಾರ