ಕಲಬುರಗಿ ಜೇವರ್ಗಿ ತಾಲೂಕಿನ ನಂದಿಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಕಾರ್ಯಕ್ರಮ ಆಚರಣೆ ಮಾಡಲಾಯಿತು. ಶಿಕ್ಷಕರಾದ ಮೈಲಾರಲಿಂಗ ಅವರು ಮಾತನಾಡುತ್ತಾ ಪ್ರತಿಯೊಬ್ಬರು ಸಸಿ ನೆಡುವ ಮೂಲಕ ಪರಿಸರಕ್ಕೆ ಕೊಡಗೆ ನೀಡಬೇಕು ಸಸಿ ನೆಡುವುದು ದೊಡ್ಡ ವಿಷಯವಲ್ಲ ಅದನ್ನು ಉಳಿಸಿ ಬೆಳಸಿ ಗಿಡ ಮರವನ್ನಾಗಿ ಮಾಡಬೇಕು ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಸಾದ್ಯವಾಗುತ್ತದೆ ಎಂದರು ಕೃಷಿ ಮೇಲ್ವಿಚಾರಕರಾದ ರಾಜಕುಮಾರ ರಕ್ಷಾಳ,ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಈರಣ್ಣಾ ಮುತ್ಯಾ,ನಾಗಯ್ಯಾ ಸ್ವಾಮಿ,ಲಿಂಗನಗೌಡ,ಬಸವರಾಜ,ಶಾಲೆಯ ಮಕ್ಕಳು ಉಪಸ್ಥಿತರಿದ್ದರು.
ವರದಿ:ಚಂದ್ರಶೇಖರ ಎಸ್ ಪಾಟೀಲ್