ದಾವಣಗೆರೆ:ಮಾನವನ ಜೀವನ ಅಮೂಲ್ಯ. ಅದನ್ನು ಸದುಪಯೋಗ ಮಾಡಿಕೊಂಡು ಬಾಳಬೇಕಿದೆ.ಅದಕ್ಕೆ ದಾಸ ಸಾಹಿತ್ಯದ ಕೀರ್ತನೆಗಳನ್ನು ಅಧ್ಯಯನ ಮಾಡಿದಾಗ ಸಾಧ್ಯವಾಗುತ್ತದೆಂದು ಸಂಗೀತ ವಿದ್ವಾಂಸರು, ಶಿಕ್ಷಕರಾದ ದಾವಣಗೆರೆಯ ಅಜಯ್ ನಾರಾಯಣ್ ಅಭಿಪ್ರಾಯ ಪಟ್ಟರು.
ಸಂತೆಬೆನ್ನೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಭವನದಲ್ಲಿ ಏರ್ಪಡಿಸಿದ್ದ ಮಾಸದ ಮಾತು ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ದಾಸಸಾಹಿತ್ಯದಲ್ಲಿ ಜೀವನ ಮೌಲ್ಯಗಳು ವಿಷಯವಾಗಿ ಮಾತನಾಡುತ್ತಿದ್ದರು.
ರಾಗಿ ತಂದಿರಾ
ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ….ಎಂಬ ದಾಸವಾಣಿ ಮಾನವನ ಜೀವನದ ಅಭ್ಯುದಯದ ಬಗ್ಗೆ ಸೂಕ್ಷ್ಮವಾಗಿ ಸೂಚಿಸುತ್ತದೆ,ಪ್ರಸ್ತುತ ಕಾಲಮಾನದಲ್ಲಿ ಆಧುನಿಕತೆಯ ಸೋಗಿಗೆ ಬಿದ್ದ ಮನುಜ ಪರೋಪಕಾರ,ಸಹಕಾರ,ಅನುಕಂಪ,ಕರುಣೆ, ದಯೆ,ಪ್ರೀತಿ ವಾತ್ಸಲ್ಯ ಗಳನ್ನು ಮರೆತು ಕ್ಷಣಿಕ ಸುಖದ ಲೋಲುಪತೆಗೆ ಒಳಗಾಗಿದ್ದಾನೆ.
ದಾಸರು ಇಂತಹ ವಿಷ ಚಕ್ರದಿಂದ ಹೊರಬನ್ನಿ ಎಂದರು.
ಮಾನವ ತ್ರಿಋಣಗಳ ತೀರಿಸುವ ಕಾಯಕದಲ್ಲಿ ಮಗ್ನನಾಗಬೇಕು.
ಕನಕದಾಸರು,ಪುರಂದರದಾಸರು, ವ್ಯಾಸರಾಯರು,ಗೋಪಾಲ ದಾಸರು ಮುಂತಾದ ದಾಸವರೇಣ್ಯರ ಕೀರ್ತನೆಗಳು ಕನ್ನಡ ಸಾಹಿತ್ಯ ಶ್ರೀಮಂತ ಗೊಳಿಸುವುದರ ಜೊತೆಯಲ್ಲಿ ಮಾನವ ಜನ್ಮ ಎತ್ತರಕ್ಕೆ ಒಯ್ಯುವಲ್ಲಿ ಸಹಕಾರಿಯಾಗಿವೆ ಎಂದು ಹೇಳಿದರು.ಶಿಕ್ಷಕ ಮಾರುತಿ ಕೀರ್ತನೆಗಳನ್ನು ಹಾಡಿದರು ಶಿಕ್ಷಕಿ ಸುನೀತಾ ಕಾರ್ಯಕ್ರಮ ನಿರೂಪಿಸಿದರು
ನಿವೃತ್ತ ಎ.ಎಸ್.ಐ ಶಾಂತರಾಜ್ ಕಾರ್ಯಕ್ರಮ ದ ಪ್ರಾಯೋಜಕತ್ವ ವಹಿಸಿಕೊಂಡಿದ್ದರು.
ಫೈಜ್ನಟ್ರಾಜ್,ಮಮತಾ ವೀರಯ್ಯ,ಶರತ್, ಸಿದ್ದಿಖ್,ಜಕ್ಕಲಿ ಶಿವಮೂರ್ತಿ,ಚಿನ್ಮಯಿ ವೀರಯ್ಯ,ಮಹೇಶ್ವರಪ್ಪ,ನಾಗೇಂದ್ರಪ್ಪ, ಮನಸೂರ್ ವಾನಂಬಾಡಿ,ಬಾಲು, ಕುಳೇನೂರು ಅಶೋಕ್ ಮುಂತಾದವರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.