ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮವು ಸುಮಾರು ಎರಡೂವರೆ ಸಾವಿರ ಮತದಾರರನ್ನು ಹೊಂದಿದ ಗ್ರಾಮವಾಗಿದೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಈ ಗ್ರಾಮದಲ್ಲಿ ಇದುವರೆಗೂ ಕಟ್ಟಕಡೆಯ ಬಡವರಿಗೆ ಮೂಲಭೂತ ಸೌಲಭ್ಯಗಳಾಗಲಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದಿರುವುದು ದುರ್ದೈವದ ಸಂಗತಿ ಹಾಗೂ ನಾಚಿಕೆಗೇಡಿತನದ ಸಂಗತಿ ಅಷ್ಟೇ ಅಲ್ಲದೆ ಈ ಗ್ರಾಮದಲ್ಲಿ ಗರ್ಭಿಣಿ ಸ್ತ್ರೀಯರಿಗಾಗಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರುವುದಿಲ್ಲ ಅನಿವಾರ್ಯದ ಸಂದರ್ಭದಲ್ಲಿ ಈ ಬಿಳವಾರದ ಗ್ರಾಮದ ಗ್ರಾಮಸ್ಥರು ಜೇವರ್ಗಿ ಹಾಗೂ ಶಹಾಪುರ,ಕಲ್ಬುರ್ಗಿಯಂತಹ ನಗರಗಳಿಗೆ ಹೋಗಬೇಕಾಗುತ್ತದೆ ಇದುವರೆಗೂ ಹಲವಾರು ಜನಪ್ರತಿನಿಧಿಗಳು ಚುನಾವಣೆಯ ಸಮಯದಲ್ಲಿ ಪೋಳ್ಳು ಭರವಸೆಗಳನ್ನು ಕೊಟ್ಟು ಹೋಗಿದ್ದಾರೆ ಮತ್ತೆ ಬರುವುದು ಚುನಾವಣೆಯ ಸಮಯದಲ್ಲಿ ಈ ಗ್ರಾಮಸ್ಥರ ಗೋಳನ್ನು ಕೇಳುವವರು ಯಾರು ಇದುವರೆಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಹೆಣ್ಣು ಮಕ್ಕಳಿಗಾಗಿ ಈ ಗ್ರಾಮದಲ್ಲಿ ಹೈಟೆಕ್ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ನಾಚಿಕೆಗೇಡಿತನದ ಸಂಗತಿ ಹೆಸರಿಗೆ ಮಾತ್ರ ಮಾಡಿಸಿ ಕೊಡ್ತೀನಿ ಅಂತಾರೆ ಇದುವರೆಗೂ ಯಾವ ಅಧಿಕಾರಿಗಳು ತಲೆಕೆಡಿಸಿಕೊಂಡಿರುವುದಿಲ್ಲ ಇನ್ನು ಮುಂದಾದರು ಎಚ್ಚೆತ್ತುಕೊಂಡು ಬಿಳವಾರ ಗ್ರಾಮದ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸುವರೋ ಇಲ್ಲವೋ ಕಾದು ನೋಡಬೇಕಾಗಿದೆ ಮುಂದೆ ಬರುವಂತ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಗ್ರಾಮೀಣ ಅಭಿವೃದ್ಧಿ ಹೋರಾಟಗಾರ ಮಾಳಪ್ಪ ಪೂಜಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.