ಕಾಂಗ್ರೆಸ್ ಸರಕಾರ ಚುನಾವಣೆಗೂ ಮುನ್ನ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಅಧಿಕಾರ ಕ್ಕೆ ಬಂದ ಕೂಡಲೇ ಜಾರಿಗೆ ಮಾಡುತ್ತೇವೆ ಅಂತ ಭರವಸೆ ನೀಡಿತ್ತು,ನುಡಿದಂತೆ ನಡೆದ ಸರ್ಕಾರ ಯಾವುದಾದ್ರೂ ಇದ್ರೆ ಅದು ಸಿದ್ದರಾಮಯ್ಯನ ಸರ್ಕಾರ ಅಂತ ಜನ ಯಾವಾಗ್ಲೂ ಗುನುಗುತ್ತಿರುವ ವಿಷಯ,2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಪೂರ್ಣ ಬಹುಮತದಿಂದ ಬಂದೆ ಬಿಡ್ತು ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಪಂಚ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ (ಉಚಿತ ಪ್ರಯಾಣ )ಜಾರಿಗೊಳಿಸುವಲ್ಲಿ ಶ್ರೀ ಸಿದ್ದರಾಮಯ್ಯನ ಸರ್ಕಾರ ಯಶಸ್ವಿ ಆಯಿತು ಈ ಶಕ್ತಿ ಯೋಜನೆ ಜಾರಿಗೊಳಿಸುವ ಮುಂಚೆ ನಾನಾ ಷರತ್ತುಗಳನ್ನು ಕಾಂಗ್ರೆಸ್ ಸರ್ಕಾರ ವಿಧಿಸುತ್ತೆ ಅದನ್ನೇ ಅಸ್ತ್ರವಾಗಿ ಪ್ರಯೋಗಿಸಲು ಬಿಜೆಪಿ ನಾಯಕರು ಕಾಯುತ್ತಾ ಕುಳಿತಿದ್ದರು,ಆದರೆ ಕಾಂಗ್ರೆಸ್ ಸರ್ಕಾರ ಬಹುನಿರೀಕ್ಷಿತ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ’ ಶಕ್ತಿ ಯೋಜನೆ ‘ಯಾವುದೇ ಷರತ್ತುಳಿಲ್ಲದೆ ಉಚಿತ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಿತು,ಶ್ರೀ ಸಿದ್ದರಾಮಯ್ಯನ ಸರ್ಕಾರ ಆದರೆ ಉಚಿತ ಪ್ರಯಾಣ ಮಾಡಲು ಯಾವುದೇ ಷರತ್ತು ಇಲ್ಲದೆ ಗುರುತಿನ ಸಲುವಾಗಿ ಆಧಾರ್ ಕಾರ್ಡ್ ಅಥವಾ ಎಲೆಕ್ಷನ್ ಐಡಿ ಕಾರ್ಡ ಕಡ್ಡಾಯ ಮಾಡಿದರು, ಕಾರಣ ನಮ್ಮ ರಾಜ್ಯದ ಮಹಿಳೆಯರಿಗೆ ಉಪಯೋಗವಾಗಲಿ ಇದರಿಂದ ಬೇರೆ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದಿಲ್ಲ ಎಂದು ಗುರುತಿನ ಚೀಟಿ ಕಡ್ಡಾಯ ಎಂದು ಹೇಳಿದರು.ಉಚಿತ ಪ್ರಯಾಣ ತಿಳಿದ ಕೂಡಲೇ ಹಲವಾರು ಪುಣ್ಯ ಕ್ಷೇತ್ರಗಳಿಗೆ ಮಹಿಳೆಯರ ದಂಡು ಹರಿದು ಬರ್ತಾ ಇದೆ ಕಾರಣ ಮಹಿಳೆಯರಲ್ಲಿ ಇರುವ ಭಯ ಕಾಂಗ್ರೆಸ್ ಸರ್ಕಾರ ಈ ಶಕ್ತಿ ಯೋಜನೆ ಯಾವಾಗ ನಿಲ್ಲಿಸಿ ಬಿಡ್ತಾರೇನೋ ಅನ್ನೋ ಭಯದಲ್ಲಿ ಮಹಿಳೆಯರು ಪ್ರವಾಸ ಕೈಗೊಂಡಿದ್ದಾರೆ. ಇತ್ತ ನಮಗೂ ಉಚಿತ ಪ್ರಯಾಣ ನೀಡಬೇಕಿತ್ತು ಅಂತ ಗಂಡಸರು ನಾವು ಕೂಡ ವೋಟ್ ಹಾಕಿದ್ದೇವೆ ಮಹಿಳೆಯರು ಮಾತ್ರ ವೋಟು ಹಾಕಿದ್ದಾರಾ ಅಂತ ಆಕ್ರೋಶ ವ್ಯಕ್ತಪಡಿಸುತ್ತ ಇದ್ದಾರೆ, ಆದರೆ ಇವತ್ತು ಗಂಗಾವತಿಯಿಂದ ಕಲಬುರಗಿ ಹೋಗುವ ಬಸ್ಸಿನಲ್ಲಿ ಮಹಿಳೆಯರೇ ತುಂಬಿ ಹೋಗಿದ್ದರು ಬಸ್ಸಿನ ಸುತ್ತಲೂ ಮಹಿಳೆಯರೇ ತುಂಬಿ ಬಸ್ಸು ಏರುವಾಗ ತುಂಬ ಸುಸ್ತಾಗಿ ಅದ್ರಲ್ಲೂ ಬೇಸಿಗೆ ಬಿಸಲು ಬೇರೆ ನನ್ನ ಸಾಯಿಸಿ ಬಿಡ್ತಾಳ ಅಂತ ಇನ್ನೊಬ್ಬ ಮಹಿಳೆ ಬಸ್ ಏರುವಾಗ ನಾ ಮುಂದು ತಾ ಮುಂದು ಅಂತ ಶಕ್ತಿ ಪ್ರದರ್ಶನ ಮಾಡಿದ್ದಾರೆ.ಅದು ಏನೇ ಇರಲಿ ಉಚಿತ ಬಸ್ ಪ್ರಯಾಣ ಮಾಡಿದ್ದೂ ಒಳ್ಳೆಯದೇ ಆದರೆ ಇದರಿಂದ ಮಹಿಳೆಯರಿಗೇನೋ ತುಂಬ ಖುಷಿ ಏನೋ ತಂದಿದೆ ಆದರೆ ಇದರಿಂದ ಆಟೋ ಮತ್ತು ಟ್ಯಾಕ್ಸಿ ಅವರಿಗೆ ತುಂಬ ತೊದರೆಯಾಗಿದ್ದು ಅವರ ಹೊಟ್ಟೆ ಮೇಲೆ ಹೊಡೆದಂತೆ ಆಗಿದೆ. ಈ ಬಸ್ಸಿನಲ್ಲಿ ಮಹಿಳೆಯರಿಂದ ಕಂಡಕ್ಟರ್ ಗೆ ತಲೆಕೆಟ್ಟು ಹೋಗಿದೆ ಅದಕ್ಕಾಗಿ ಸರ್ಕಾರ ಬಸ್ಸಿನಲ್ಲಿ ಯಾವುದೇ ಕಳ್ಳತನ,ವಾಗ್ವಾದ, ಯಾವುದೇ ಅಹಿತಕರ ಘಟನೆ ಆಗದಂತೆ ಮುನ್ನೆಚ್ಚರಕೆ ಕ್ರಮವಾಗಿ ಒಬ್ಬ ಹೋಮ ಗಾರ್ಡ ಅಥವಾ ಪೊಲೀಸ್ ಸಿಬ್ಬಂದಿ ನಿಯೋಜನೆ ಕಡ್ಡಾಯ ಮಾಡಬೇಕಿದೆ.
ವರದಿ : ಪುನೀತಕುಮರ