ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಾದ್ಯಂತ ಮುಂಗಾರು ಮಳೆ ತಡವಾದ ಕಾರಣ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಕುಡಚಿ ಮತಕ್ಷೇತ್ರದ ಕಪ್ಪಲಗುದ್ದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಕುಡಿಯುವ ನೀರಿಗಾಗಿ ಪರದಾಡುವ ಪ್ರಸಂಗ ನಿರ್ಮಾಣವಾಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸೇರಿಕೊಂಡು ಪಕ್ಕದ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಸಹಕಾರದಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸರಬರಾಜು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕುಡಿಯುವ ನೀರು ಸರಬರಾಜು ಮಾಡುವಲ್ಲಿ ತಾರತಮ್ಯ ಮಾಡುತ್ತಿದ್ದು ನೀರು ಜೀವ ಜಲವಾಗಿದ್ದು ಎಲ್ಲರಿಗೂ ನೀರು ಬೇಕೇಬೇಕು ಎಲ್ಲರಿಗೂ ಕುಡಿಯುವ ನೀರು ಸಮ ಪ್ರಮಾಣದಲ್ಲಿ ಒದಗಿಸಬೇಕು ಇನ್ನು ಕೆಲವು ಕಾಲೋನಿಗಳಲ್ಲಿ ನೀರು ಬರುವುದಿಲ್ಲ,ನೀರು ತರುವ ಟ್ಯಾಂಕರ್ ಬರದೇ ಇರುವ ಕೆಲವು ವಾರ್ಡ ಗಳ ಸಾರ್ವಜನಿಕರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗ್ರಾಮದಲ್ಲಿ ಕಳೆದ 15 ದಿನಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು,ಮಳೆ ಆಗದ ಕಾರಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವಾರು ಕೊಳವೆ ಬಾವಿಗಳ ನೀರು ಬತ್ತಿ ಹೋಗಿದ್ದು, ಪರ್ಯಾಯ ವ್ಯವಸ್ಥೆಯಾಗಿ ದಿನಕ್ಕೆ ಸುಮಾರು ಐದಾರು ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು ನೀರು ಸರಬರಾಜು ಮಾಡುವಲ್ಲಿ ಒಂದಿಷ್ಟು ವ್ಯತ್ಯಾಸ ಆಗಬಹುದು ಗ್ರಾಮಸ್ಥರು ಸಹಕರಿಸಬೇಕು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲ ನಾಯಿಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಹಾದೇವ ನಾಯಿಕ ಗಂಗಪ್ಪ ಐದಮನಿ,ತುಕಾರಾಂ ಯಡ್ರಂವಿ ಬಾಲಚಂದ್ರ ಮೇತ್ರಿ,ಪಾಂಡುರಂಗ ಐದಮನಿ, ಸಾವಕ್ಕ ಐದಮಣಿ,ಮಾಧುರಿ ಮೇತ್ರಿ, ಶೇಖವ್ವ ಮೇತ್ರಿ,ಸುಜಾತಾ ಮೇತ್ರಿ,ಮಮತಾಜ ಐದಮನಿ ಸೇರಿದಂತೆ ಇತರರು ಇದ್ದರು.
ವರದಿ-ಉಮೇಶ್ ಯರಡತ್ತಿ