ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಟಿಪ್ಪು ಸುಲ್ತಾನ್ ಚೌಕ್ ವಾರ್ಡಿನ ಮಹಿಳೆಯರಿಗೋಸ್ಕರ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಮುಜುಗರದ ಸಂಗತಿಯಾಗಿದೆ ದಯವಿಟ್ಟು ಶೌಚಾಲಯ ಕಟ್ಟಿ ಕೊಡಿ ಇಲ್ಲದಿದ್ರೆ ಸಂಬಂಧಪಟ್ಟ ಅಧಿಕಾರಿಗಳು ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಬಿಳವಾರ್ ಗ್ರಾಮದ ಗ್ರಾಮಸ್ಥರಾದ ಶರೀಫ್ ಸಾಬ ನದಾಫ್ ಅವರು ಆಕ್ರೋಶವನ್ನು ಹೊರ ಹಾಕಿದ್ದಾರೆ ಚುನಾವಣೆಯ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ಶಾಸಕರು ಮಾತು ಕೊಟ್ಟಿದ್ದಾರೆ ಆ ಮಾತು ಮರೆತಂತೆ ಕಾಣುತ್ತಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ವಹಿಸಿದರೆ ಗ್ರಾಮದ ಎಲ್ಲಾ ಮಹಿಳೆಯರೊಂದಿಗೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಶರೀಫ್ ಸಾಬ್ ನದಾಫ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
