ವಿಜಯನಗರ ಜಿಲ್ಲೆಯ ಕೊಟ್ಟೂರಿನ
ಪಟ್ಟಣದಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಿವೃತ್ತ ಫೈರ್ ಆಫೀಸರ್ ಮಲ್ಕನಾಯ್ಕ್ ಅವರಿಗೆ ರೈಲ್ವೆ ಸ್ಟೇಷನ್ ಕಡೆಗೆ ವಾಯು ವಿಹಾರಕ್ಕೆ ಎಂದು ಹೋದಾಗ ಹುಚ್ಚು ನಾಯಿ ಹಿಂಬಾಲಿಸಿ ಅವರನ್ನು ಕೆಡವಿ ಕಚ್ಚಿ ತುಂಬಾ ಗಾಯಗಳಾಗಿದ್ದವು ಮತ್ತು ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಪಟ್ಟಣದ ಇತರ ಬಡಾವಣೆಯ ಸಾರ್ವಜನಿಕರಿಗೆ ಅನೇಕ ಕಡೆ ಹುಚ್ಚು ನಾಯಿ ಕಡಿದಿದೆ ಎಂದು ಸಾರ್ವಜನಿಕರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸ್ಸೂರುಲ್ಲಾರವರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ತಿಳಿಸಿದ ತಕ್ಷಣ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಾರ್ವಜನಿಕರನ್ನು ಕಡಿದ ಹುಚ್ಚು ನಾಯಿಯನ್ನು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸೆರೆ ಹಿಡಿದು ಹಿಡಿದಿದ್ದೇವೆ.ಪಟ್ಟಣದ ಸಾರ್ವಜನಿಕರು ಹುಚ್ಚು ನಾಯಿಯ ಭಯದ ವಾತವರಣವಿಲ್ಲೆದೆ ನೆಮ್ಮದಿಯಿಂದ ಓಡಾಡಬಹುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಎ.ನಸುರುಲ್ಲಾ ತಿಳಿಸಿದರು.ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಕಿರಿಯ ಅರೋಗ್ಯ ನೀರಿಕ್ಷಕರು ಅನೂಷ್ ರವರು ಮತ್ತು ಅರ್.ಐ.ಎಸ್ ಕೊಟ್ರೇಶಿ,ಹೇಮನಗೌಡ,ಮುತ್ತು,ಎಸ್.ಪರುಸಪ್ಪ,ಮಾದೂರು ಕೊಟ್ರೇಶಿ,ದುರುಗಪ್ಪ,ಬಿ ರಾಜ,ಬಿ ರಮೇಶ್, ಟಿ.ಕೊಟ್ರೇಶಿ,ಕಾರ್ತಿಕ್,ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರು ಮತ್ತು ಹೌಸಿಂಗ್ ಬೋರ್ಡ್ ಕಾಲೋನಿಯ ಸಾರ್ವಜನಿಕರು ಇತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.