ಅಕ್ರಮ ಮದ್ಯ ಮಾರಾಟ ಒದ್ದೋಡಿಸಿ!
ಸರಕಾರಿ ಭೂಮಿ ಸಾಗುವಳಿದಾರರಿಗೆ ಪಟ್ಟಾ ವಿತರಿಸಿ!
ಜೆಜೆಎಂ ಯೋಜನೆ ನಿಲ್ಲಿಸಿ!
ಗುತ್ತಿಗೆ ಕಾರ್ಮಿಕ ಪದ್ಧತಿ ನಿಲ್ಲಿಸಲು ಆಗ್ರಹಿಸಿ!
100.ಕಿ.ಮೀ.ಕಾಲ್ನಡಿಗೆ ಜಾಥಾ ಯಶಸ್ವಿ… ಲಿಂಗಸುಗೂರು:16ನೇ ತಾರೀಖಿನಿಂದ 19ನೇ ತಾರೀಖಿನವರೆಗೆ ಹೋರಾಟಗಾರ ಆರ್.ಮಾನಸಯ್ಯ ನೇತೃತ್ವದಲ್ಲಿ ಹಾಗೂ ಸಂಘಟನಾ ಸಂಚಾಲಕರು ಸೇರಿ 100 ಕಿಲೋಮೀಟರ್ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡು ಲಿಂಗಸುಗೂರಿನ 20ಕ್ಕೂ ಹೆಚ್ಚು ಹಳ್ಳಿಗಳ ಪಾದಯಾತ್ರೆ ಮಾಡಿ ಲಿಂಗಸ್ಗೂರಿನಲ್ಲಿ ತಾತ್ಕಾಲಿಕ ಸಮಾಪ್ತಿ ತಲುಪಿತು ಇದರ ಉದ್ದೇಶ ಅಕ್ರಮ ಮಧ್ಯಮ ಮಾರಾಟ ಬಂದ್ ಮಾಡಬೇಕು, ಸರಕಾರ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡಬೇಕು,ಕೇಂದ್ರ ಸರ್ಕಾರ ತಂದಿರುವ ಜಲಜೀವನ್ ಮಿಷನ್ ಅಕ್ರಮ ಹಾಗೂ ಬೋಗಸ್ ಕಾಮಗಾರಿ ಕುರಿತು ತನಿಖೆಯಾಗಬೇಕು ಸುಮಾರು ವರ್ಷಗಳಿಂದ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಹಿರಂಗವಾಗಿ ಅಕ್ರಮ ಮದ್ಯಮಾರಾಟವಾಗುತ್ತಿದೆ ಸಂಬಂಧಪಟ್ಟ ಅಬಕಾರಿ ಇಲಾಖೆ,ಪೊಲೀಸ್ ಇಲಾಖೆ,ಪುಡಿ ರೌಡಿಗಳು,ಸ್ವಯಂ ಘೋಷಿತ ಬಿಳಿ ಅಂಗಿ ಲೀಡರ್ ಗಳು ಆಪ್ತ ವಸೂಲಿ ಗಿರಾಕಿಗಳಾಗಿದ್ದಾರೆ ಶ್ರೀ ಶ್ರೀ ಮಾನಪ್ಪ ವಜ್ಜಲ್ ಲಿಂಗಸ್ಗೂರಿನ ಶಾಸಕರು ಪಟ್ಟಣದ ಹೃದಯ ಭಾಗ ಬಸವಸಾಗರ ಕ್ರಾಸ್ನಲ್ಲಿ ಸಂಗಮ್ ಬಾರ್ ತೆರೆದಿರುವಾಗ ಜನರಿಗೆ ಯಾವ ರೀತಿ ಒಳಿತು ಮಾಡುತ್ತಾರೆ? ಸಾರಾಯಿ ಕುಡಿಸಿ ಜನರನ್ನು ಸಾಯಿಸುವುದಕ್ಕಾಗಿ ಬಾರ್ ಕಟ್ಟಿದ್ದಾರೆಂದು ಆರ್.ಮಾನಸಯ್ಯಾ ಪ್ರಶ್ನಿಸಿದರು. ಶಾದಿ ಮಹಲ್‌ನಲ್ಲಿ ನಡೆದ ಸಮಾರೋಪ ಸಭೆಯೊಂದಿಗೆ 4 ದಿನಗಳ 100 ಕಿ.ಮೀ ಪಾದಯಾತ್ರೆ ಯಶಸ್ವಿಯಾಗಿ ನಡೆದಿದ್ದು ಈ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.
ಪಾದಯಾತ್ರೆಯ ಸಮಾರೋಪ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ನೀಡಿದ ಭರವಸೆಗಳು ಇಂತಿವೆ.
1) ಅಕ್ರಮ ಮದ್ಯ ಮಾರಾಟ ತಡೆಯಲು ನಾಳೆ ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳ ಸಭೆ ಕರೆಯುವುದಾಗಿ ಡಿವೈಎಸ್ಪಿ ಮಂಜುನಾಥ್ ಮತ್ತು ಅಬಕಾರಿ ನಿರೀಕ್ಷಕರು ಭರವಸೆ ನೀಡಿ 15 ದಿನಗಳ ಗಡುವು ಕೇಳಿದರು ತಾಲೂಕಿನಲ್ಲಿರುವ 1370 ಅಕ್ರಮ ಮಾರಾಟ ಕೇಂದ್ರಗಳನ್ನು ಸಂಪೂರ್ಣವಾಗಿ ಮುಚ್ಚದಿದ್ದಲ್ಲಿ ಎರಡು ಇಲಾಖೆಗಳ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟದಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿ ಹೋರಾಟ ನಡೆಸುವುದಾಗಿ ಘೋಷಿಸಿದರು.
2) ತಹಸೀಲ್ದಾರ್ ಲಿಂಗಸಗೂರ ಮಾತನಾಡಿ,15 ದಿನಗಳ ಕಾಲಾವಕಾಶ ಪಡೆದು ಸರ್ಕಾರಿ ಭೂಮಿಯನ್ನು ಬಿಟ್ಟುಕೊಟ್ಟಿರುವ ಸಾಗುವಳಿದಾರರಿಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು ಹೊಸೂರು ಗ್ರಾಮದ 16 ದಲಿತರ ಜಮೀನು ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
3)ಜಲ ಜೀವನ ಮಿಷನ್‌ನ ಅಕ್ರಮ ಮತ್ತು ಬೋಗಸ್ ಕಾಮಗಾರಿಗಳ ಕುರಿತು ನಾಳೆ ಬೆಳಗ್ಗೆ ಹೋರಾಟಗಾರರೊಂದಿಗೆ ಸಭೆ ನಡೆಸಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಒಪ್ಪಿಗೆ ನೀಡಿದರು.
ಜಾಥಾದಲ್ಲಿ ಭಾಗವಹಿಸಿದ ಎಲ್ಲಾ ಪಾದಯಾತ್ರೆ ಸಮಿತಿಯ ಮುಖಂಡರು ಹೋರಾಟವನ್ನು ಮುಂದುವರಿಸಲು ಪ್ರತಿ ಹಳ್ಳಿಗಳಲ್ಲಿ ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಯುವ ಜನ ರಂಗ (ಆರ್‌ವೈಎಫ್‌ಐ) ಮತ್ತು ಮಹಿಳಾ ಸಂಘ (ಎಐಆರ್‌ಡಬ್ಲ್ಯೂಒ) ರಚಿಸುವ ಪ್ರಸ್ತಾಪವನ್ನು ಮುಂದಿಟ್ಟರು.ಸಭೆಯು ಈ ಪ್ರಸ್ತಾವನೆಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.ಕಾಮ್ರೇಡ್ ಆದೇಶ ಹಿರೇನಾಗನೂರು,ಎಂ.ನಿಸರ್ಗ,ಶರಣಬಸವ ಈಚನಾಳ್,ಗಂಗಾಧರ ಗುಂತಗೋಳ,ರುಕ್ಮಿಣಿ, ಹಮೀದ್,ಬಸವರಾಜ ಬಡಿಗೇರ್,ಚಿದಾನಂದ ಕಸ್ಬಲಿಂಗಸಗುರು,ಹುಲ್ಲೇಶ ಹಿರೇನಗನೂರು,ಶಿದ್ದಣ್ಣ, ತಿಪ್ಪೇಗೌಡ ಯುವಕರು,ಚಿಕ್ಕಮ್ಮ ಗೊಮ್ಮೂರ ಯುವಕರು ಯಶಸ್ವಿಯಾಗಿವೆ ಲಿಂಗಸಗೂರು ಶಾದಿ ಮಹಲ್‌ನಲ್ಲಿ 100 ಕಿಲೋಮೀಟರ್ ನಾಲ್ಕು ದಿನಗಳ ಪಾದಯಾತ್ರೆಯನ್ನು ಮುಕ್ತಾಯಗೊಳಿಸಲಾಯಿತು.