ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ತೊಂಬೆಗಳು ಪಾಚಿ ಕಟ್ಟಿಕೊಂಡು ಅದರ ಪಕ್ಕದಲ್ಲಿ ಚರಂಡಿಗಳು ಕೊಳಚೆಯಿಂದ ತುಂಬಿಕೊಂಡು ನಾರುತ್ತಿದೆ ಈ ಸಮಸ್ಯೆಯನ್ನು ಗ್ರಾಮದ ಜನರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಣಿಕ್ಯನಿಗೆ ಹಲವು ಬಾರಿ ಹೇಳಿದರೂ ಯಾವುದೇ ಕಾರ್ಯವನ್ನು ಕೈಗೆ ತೆಗೆದುಕೊಳ್ಳದೆ ನಿರ್ಲಕ್ಷ ಮಾಡುತ್ತಿದ್ದಾರೆ ಬಂದಂತಹ ಗ್ರಾಮದ ಜನರು ತೊಂಬೆಗಳಲ್ಲಿ ಪಾಚಿ ಕಟ್ಟಿಕೊಂಡು ನೀರು ಕುಡಿಯಲು ಆಗುತ್ತಿಲ್ಲ ಎಂದು ದೂರು ತಂದರೆ ಅವರನ್ನು ಹೆದರಿಸಿ ಬೆದರಿಸಿ ಪಂಚಾಯಿತಿಯಿಂದ ಆಚೆ ತಳ್ಳುತ್ತಾನೆ ಕೂಡಲೇ ಈತನನ್ನು ಕೆಲಸದಿಂದ ವಜಾ ಮಾಡಬೇಕು ಅಥವಾ ದೂರದ ಜಿಲ್ಲೆಯ ಬೇರೆ ಪಂಚಾಯಿತಿಗೆ ಕಳುಹಿಸಬೇಕು ಎಂದು ಗ್ರಾಮಸ್ಥರ ಮನವಿ ಮಾಡಿಕೊಂಡರು.
ಅಷ್ಟೇ ಅಲ್ಲದೆ ಇಲ್ಲಿನ ನರೇಗಾ ಕೆಲಸಗಳನ್ನು ಕೂಲಿ ಕಾರ್ಮಿಕರಿಗೆ ಕೊಡದೆ ಇರುವುದರಿಂದ ಸುಮಾರು 40 ಕ್ಕಿಂತ ಹೆಚ್ಚು ಕುಟುಂಬಸ್ಥರು ವಲಸೆ ಹೋಗಿ ದುಡಿಯುತ್ತಿದ್ದಾರೆ ನರೇಗಾ ಕೆಲಸ ಕೇಳಲು ಜಾಬ್ ಕಾರ್ಡ್ ತೆಗೆದುಕೊಂಡು ಪಂಚಾಯಿತಿಗೆ ಹೋದರೆ ಹತ್ತು ಹಲವು ಬಾರಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಿಸಲು ಸುತ್ತಾಡಿಸುತ್ತಾನೆ ಎಂಬ ದೂರು ಇದೆ ಆದರಿಂದ ಇ .ಓ ಸಾಹೇಬರು ಪಿಡಿಒ ಮಾಣಿಕ್ಯ ಅವರ ಬಗ್ಗೆ ಕ್ರಮ ತೆಗೆದು ಕೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ವರದಿ:ಉಸ್ಮಾನ್ ಖಾನ್