ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಇಂದು “ಆರ್.ಪಿ.ಐ.(ಎ) ಪಕ್ಷ ಹಾಗೂ ಡಿಎಸ.ಎಸ್.ಸಮಿತಿಯ ಸಂಯೊಗದೊಂದಿಗೆ ತಾಲೂಕಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳಾದ –
1.ತಾಲೂಕಾ ಕ್ರೀಡಾಂಗಣಕ್ಕೆ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಹೆಸರು ನಾಮಕರಣ ಮಾಡುವುದು.
2.ಅಂಬೇಡ್ಕರರವರ ಮೂತಿ೯ಯನನ್ನು ನವೀಕರಿಸುವುದು.
3.ಇಂಡಿ ಸರಕಾರಿ ಆಸ್ಪತ್ರೆಯಲ್ಲಿನ ವೈ ದ್ಯಾಧಿಕಾರಿಗಳನ್ನು ವಗಾ೯ವಣೆ ಮಾಡಿ,ಅಲ್ಲಿಯ ಅನುದಾನವನ್ನು ಲೋಕಾಯುಕ್ತರಿಂದ ತನಿಖೆಗೊಳಿಸಬೇಕು
4.ಎಲ್ಲಾ ಹಳ್ಳಿಗಳಿಗೆ ಬಸ್ಸ ಸೌಲಭ್ಯ ಕಲ್ಪಿಸುವುದು.
5.ತಾಲೂಕಾ ಆಡಳಿತ ಕಛೇರಿಯಲ್ಲಿ ದಲ್ಲಾಳಿಗಳ ಹಾವಳಿ ಕಡಿಮೆಯಾಗಬೇಕು.
6.ಎಸ್ಸಿ/ಎಸ್ಟಿ.ಜನಾಂಗಕ್ಕೆ ಸ್ಮಶಾನ ಜಾಗವನ್ನು ಕಡ್ಡಾಯವಾಗಿ ಮಂಜೂರು ಮಾಡಬೇಕು.6.ನಕಲಿ ಯೂಟ್ಯೂಬ್ ಹಾಗೂ ಕೆಲವು ನಕಲಿ ಪತ್ರಕತ೯ರ ಹಾವಳಿ ತಡೆಗಟ್ಟಬೇಕು ಹೀಗೆ ಹಲವಾರು ಬೇಡಿಕೆಗಳು ಈಡೇರಿಸಬೇಕೆಂದು ಸಂಘಟನಾಕಾರರು ಬೆಳಗ್ಗೆ 12 ಘಂಟೆಗೆ ತಾಲೂಕಾ ಪ್ರವಾಸಿ ಮಂದಿರದಿಂದ ವಿವಿಧ ವೃತ್ತಗಳ ಮುಖಾಂತರ ಹಾದು,ನಂತರ ತಾಲೂಕಾ ಆಡಳಿತ ಕಛೇರಿಗೆ ಆಗಮಿಸಿ ಮಾನ್ಯ ತಾಲೂಕಾ ಕಂದಾಯ ಉಪವಿಭಾಗಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳು ಕನಾ೯ಟಕ ಸರಕಾರ ಬೆಂಗಳೂರುರವರ ಸನ್ನಿಧಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಆರ್.ಪಿ.ಐ.(ಎ)ಪಕ್ಷದ ಅಧ್ಯಕ್ಷರಾದ ನಾಗೇಶ ತಳಕೇರಿ.ಡಿ.ಎಸ.ಎಸ್.ಮುಖಂಡರಾದ ವಿನಾಯಕ ಗುಣಸಾಗರ.ಬಿ.ಎಸ್.ತಳವಾರ.ಬಾಬು ಕಾಂಬಳೆ.ರೇಖಾ ಸಿಂಗೆ.ಅಂಬೇಡ್ಕರ ಕಾಂಬಳೆ.ವಿಶಾಲ ಮೇಲಿನಮನಿ.ಕಾಂತಾಬಾಯಿ ಮುನಸಿ.ಧಾನೇಶ್ವರಿ.ಸವಿತಾ ಚಲವಾದಿ.ಅಯೂಬ ನಾಟೀಕಾರ.ರವಿಕುಮಾರ ಸಿಂಗೆ.ಸಚೀನ ಸಾವಳಕರ.ದುಂಡು ಬಿರಾದಾರ. ಇತರರು ಭಾಗವಹಿಸಿದ್ದರು.
ವರದಿ. ಅರವಿಂದ್ ಕಾಂಬಳೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.