ಚಾಮರಾಜನಗರ ಜಿಲ್ಲೆಯ ಹನೂರು:ಶ್ರೀಮುಮ್ಮಡಿ ಕೃಷ್ಣರಾಜ ಒಡೆಯರ ಅವರು ಕರ್ನಾಟಕಕ್ಕೆ ನೀಡಿದ ಕೊಡುಗೆ ಹಾಗೂ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು.
ಪ್ರಕೃತಿ ಉಳಿಸುವಲ್ಲಿ ಸಹ ಅಪಾರ ಶ್ರಮವಹಿಸಿದ್ದರು ಎಂದು ಮೈಸೂರು ಸಂಸ್ಥಾನದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಣ್ಣಿಸಿದರು.
ಹನೂರು ತಾಲೂಕಿನ ಎಲ್ಲೇಮಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕದ ಸವಿನೆನಪಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸನಾತನ ಸಂಸ್ಕೃತಿ ಪುನರುತ್ಥಾನ ದಿನಾಚರಣೆಯ ಅಂಗವಾಗಿ ಕರ್ನಾಟಕದಲ್ಲಿ ಕೋಟಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮೈಸೂರು ಆಸ್ಥಾನದ ಮಹಾರಾಜರ ಆಳ್ವಿಕೆಯಲ್ಲಿ ಕರ್ನಾಟಕ ರಾಜ್ಯ ಉದ್ದಗಲಕ್ಕೂ ಮುಮ್ಮಡಿ ಕೃಷ್ಣರಾಜ ಒಡೆಯರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಇದನ್ನು ರಾಜಮನತದವರು ಸಹ ಮುಂದುವರೆಸಿಕೊಂಡು ಬಂದಿದ್ದಾರೆ ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಹ ಸಾವಿರಾರು ಕೆರೆಕಟ್ಟೆ ನಿರ್ಮಿಸಿದ್ದಾರೆ ಅಲ್ಲದೆ ಹಲವಾರು ಅಣೆಕಟ್ಟುಗಳನ್ನು ಕಟ್ಟಿಸಿ ನಾಡಿಗೆ ಶಾಶ್ವತ ಕೊಡುಗೆ ನೀಡಿದ್ದರೆ ಮೈಸೂರು ಸುತ್ತ ಮುತ್ತ ಪ್ರದೇಶಗಳು ಪ್ರಕೃತಿಯಿಂದ ಕಂಗೊಳಿಸುತ್ತಿದ್ದು ಇದು ಪ್ರಕೃತಿ ಉಳಿಸುವಲ್ಲಿ ಸಹ ಪಾತ್ರ ವಹಿಸಿದ್ದಾರೆ ಎಂದರಲ್ಲದೆ ಆಧುನಿಕ ಯುಗದಲ್ಲಿ ಉತ್ತಮ ಆರೋಗ್ಯಕ್ಕಾಗಿ ಉತ್ತಮ ಪರಿಸರ ಅಗತ್ಯವಾಗಿದೆ ಹೀಗಾಗಿ ಪರಿಸರ ಉಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ,ಮೈಸೂರು ಆಸ್ಥಾನದ ರಾಜರಿಗೂ ನಮ್ಮ ಜಿಲ್ಲೆಗೂ ಸಹ ಹಿಂದಿನಿಂದ ಒಡನಾಟ ಇದೆ,ಅಂದಿನ ಕಾಲದಲ್ಲೇ ಮಹಾರಾಜರು ಪರಿಸರ ಬಗ್ಗೆ ಅಪಾರ ಕಾಳಜಿವಹಿಸಿದ್ದರು ಹೀಗಾಗಿ ಸುತ್ತಮುತ್ತ ಪ್ರದೇಶಗಳಲ್ಲಿ ಮರಗಿಡಗಳನ್ನು ಯತೇಚ್ಚವಾಗಿ ಬೆಳೆಸಿದ್ದರು,ನೀರು ಸಂಗ್ರಹ ಮಾಡಲು ಹೊಂಡ, ಕರೆಕಟ್ಟೆಗಳ ನಿರ್ಮಾಣ ಮಾಡಿಸಿದ್ದರು ಇದು ಕೃಷಿ ರಂಗದಲ್ಲಿ ರೈತರಿಗೆ ಅನುಕೂಲವಾಗಿ ಜನರ ಜೀವನಕ್ಕೆ ದಾರಿದಿಪವಾಗುವಂತೆ ಮಾಡಿದ್ದರು ಶಿಕ್ಷಣ ಸೇರಿದಂತೆ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು ಮಹಾರಾಜರ ಸ್ಮರಿಸುವ ಜೊತೆಗೆ ಶಾಲಾ ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಸಹ ಸುತ್ತಮುತ್ತಲಿನ ಅಗತ್ಯ ಜಾಗಗಳಲ್ಲಿ ಸಸಿ ನೆಟ್ಟು ಬೆಳೆಸಿ ಪರಿಸರ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ಇದೆ ವೇಳೆ ಧಾರವಾಡ ಆನಂದ ಯೋಗ ಮಂದಿರದ ಪ್ರಜ್ಞಾನಂದಾ ಸ್ವಾಮೀಜಿ ಹಾಗೂ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕರ್ನಾಟಕದಲ್ಲಿ ಕೋಟಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಸಂಸ್ಕೃತಿ ಸೇವಾ ವಾರಿಧಿ-ಸಂಸೇವಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ರಂ ಶಿವಶಂಕರ,ಕಾರ್ಯದರ್ಶಿ ಸುಷ್ಮಾ ಮಯ್ಯಾ,ಮಹದೇಶ್ವರಬೆಟ್ಟದ ಆರ್ಚಕ ಕೆ.ವಿ.ಮಹದೇಶ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದತ್ತೇಶ್ ಕುಮಾರ್,ಮುಖ್ಯ ಶಿಕ್ಷಕಿ ನಾಗಕನ್ನಿಕ,ಸಂಶೋಧಕ ದುಂಡಯ್ಯ,ಮುಖಂಡರಾದ ರಂಗಸ್ವಾಮಿ, ಮಹದೇವ್,ನಾಗೇಶ್ ಮತ್ತಿತರರು ಇದ್ದರು.
ವರದಿ:ಉಸ್ಮಾನ್ ಖಾನ್