ಸಿಂಧನೂರು:ಇಡೀ ಭೂ ಮಂಡಲದಲ್ಲಿ ಮನುಷ್ಯರಿಗೆ ಅತ್ಯಂತ ಉಪಯುಕ್ತವಾದ ವಸ್ತು ಎಂದರೆ ಸಸ್ಯಗಳು ಇಂತಹ ಸಸಿಗಳನ್ನು ಉಳಿಸಿ ಬೆಳೆಸುವಲ್ಲಿನ ವನಸಿರಿ ಫೌಂಡೇಶನ್ ಕಾರ್ಯ ತುಂಬಾ ಶ್ಲಾಘನೀಯ ಎಂದು ಡಾ.ಚೆನ್ನನಗೌಡ ಪಾಟೀಲ ನೇತ್ರ ತಜ್ಞರು ಹರ್ಷ ವ್ಯಕ್ತಪಡಿಸಿದರು.
ಸಿಂಧನೂರು ತಾಲೂಕಿನ ಗುಂಜಹಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ವನ ಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಿಂಧನೂರು ಬಿಸಿಲ ನಾಡು.ಈ ಬಿಸಿಲು ನಾಡನ್ನು ಹಸಿರು ನಾಡಾಗಿಸುವಲ್ಲಿ ಮತ್ತು ಸಿಂಧನೂರಿನ ರಸ್ತೆಯ ಅಕ್ಕಪಕ್ಕದಲ್ಲಿ ಗಿಡಮರಗಳ ಉಳಿವಿಗಾಗಿ ವನಸಿರಿ ಫೌಂಡೇಶನ್ ಫೌಂಡೇಶನ್ ಕಾರ್ಯ ತುಂಬಾ ಅಗಾಧವಾದದ್ದು,ಕಡಿದು ಹಾಕಿದ ಆಲದ ಮರಕ್ಕೆ ಮರುಜನ್ಮ ನೀಡಿ ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸುತ್ತಿರುವುದು ಅದೊಂದು ಅದ್ಭುತವಾದ ಕಾರ್ಯ ಇಂತಹ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವ ವನಸಿರಿ ಫೌಂಡೇಶನ್ ತಂಡಕ್ಕೆ ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ ಮತ್ತು ನೀವುಗಳೆಲ್ಲರೂ ವನಸಿರಿ ತಂಡದ ವತಿಯಿಂದ ಇಂದು ನೆಟ್ಟಿರುವ ಸಸಿಗಳನ್ನು ಪೋಷಣೆ ಮಾಡಿ ಬೆಳಸಿದರೆ ವನಸಿರಿ ಫೌಂಡೇಶನ್ ವತಿಯಿಂದ ಪರಿಸರ ರಕ್ಷಕ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ ಈ ಪ್ರಶಸ್ತಿ ಪತ್ರವನ್ನು ಎಲ್ಲರೂ ಪಡೆದುಕೊಳ್ಳಬೇಕು ಜೊತೆಗೆ SSLCಯಲ್ಲಿ 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತರಬೇಕು,ಎಲ್ಲರೂ ಮೊಬೈಲ್ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಬೇಕು ವಿದ್ಯಾಬ್ಯಾಸದ ಕಡೆ ಹೆಚ್ಚು ಗಮನಹರಿಸಬೇಕು ಮಕ್ಕಳಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಕಣ್ಣಿನ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಲು ಸಲಹೆ ನೀಡಿದರು ನಂತರ 8ನೇ ತರಗತಿ ಅಬ್ದುಲ್ ಕಲಾಂ ಎನ್ನುವ ವಿದ್ಯಾರ್ಥಿಗೆ ಒಂದು ಸಸಿಯ ಜವಾಬ್ದಾರಿ ನೀಡಿ ಮುಂದಿನ ಎರಡು ವರ್ಷದಲ್ಲಿ ಈ ಸಸಿಯನ್ನು ಬೆಳಸಿ ಪೋಷಣೆ ಮಾಡಿದರೆ 12ನೇ ತರಗತಿಯವರೆಗೆ ಓದಲು ಬೇಕಾದ ಎಲ್ಲ ಸೌಲಭ್ಯಗಳನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಡಾ.ಚೆನ್ನನಗೌಡ ನೇತ್ರ ತಜ್ಞರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ವತಿಯಿಂದ ಸಿಂಧನೂರಿನ ಖ್ಯಾತ ನೇತ್ರ ತಜ್ಞರಾದ ಡಾ.ಚೆನ್ನನಗೌಡ ಪಾಟೀಲ ಮತ್ತು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಪರಿಸರ ರಾಜ್ಯ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಿಂಧನೂರಿನ ಖ್ಯಾತ ನೇತ್ರ ತಜ್ಞರಾದ ಡಾ.ಚೆನ್ನನಗೌಡ ಪಾಟೀಲ,ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ,ಶಾಲಾ ಮೇಲುಸ್ತುವಾರಿ ಸಮಿತಿ ಅದ್ಯಕ್ಷರಾದ ಕದನ್ ಸಾಬ್,ಶಾಲೆಯ ಮುಖ್ಯಗುರುಗಳು ನಾಗಪ್ಪ ಡಿ.ವನಸಿರಿ ಫೌಂಡೇಶನ್ ಜಾಲತಾಣದ ಅದ್ಯಕ್ಷರು ಚನ್ನಪ್ಪ ಕೆ.ಹೊಸಹಳ್ಳಿ,ಮಸ್ಕಿ ತಾಲೂಕ ಅದ್ಯಕ್ಷರು ರಾಜು ಬಳಗಾನೂರ,ಶಿಕ್ಷಕರು ನಜೀರ್ ಅಹ್ಮದ್,ಬಸವರಾಜ,ಮಹಾಂತೇಶ, ರಜಿನಿ,ಈರಮ್ಮ,ಊರಿನ ಮುಖಂಡರು ಅಯ್ಯನಗೌಡ,ರಮೇಶ ಕೆ.ಹೊಸಹಳ್ಳಿ ಹಾಗೂ ಮುದ್ದು ಮಕ್ಕಳು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.