ಕಲಬುರಗಿ ಜಿಲ್ಲೆಯ ಜೇವರ್ಗಿ:ವಿಶ್ವದೆಲ್ಲೆಡೆಯಿಂದ ಜ್ಞಾನದ ಬೆಳಕು ಹರಿದು ಬರಲಿ ಎಂದು ನಮ್ಮ ಋಷಿ ಮುನಿಗಳು ಕೂಡಾ ಪ್ರಾರ್ಥಿಸಿದರು ನಾವೆಲ್ಲರೂ ವಿಶ್ವದ ಒಂದು ಅಂಗವೆಂಬುದೇ ಆ ಮಹಾತ್ಮರ ಸಂದೇಶವಾಗಿದೆ ಆದುದರಿಂದ ಪವಿತ್ರವಾದ ಜ್ಞಾನದಾಸೋಹವನ್ನು ಮಾಡುವ ಗುರುಗಳಲ್ಲಿ ಬೇದ ಮಾಡಲಾಗದು ಜಗತ್ತಿನ ಯಾವ ಕಡೆಯಿಂದಾಗಲಿ ಜ್ಞಾನಾಮೃತವಾಗಲಿ,ಸದ್ವಿಚಾರವಾಗಲಿ ಎಲ್ಲಾ ಸ್ಪರ್ಧಾ ಆಕಾಂಕ್ಷಿಗಳು ಪಡೆದುಕೊಂಡರೆ ಜ್ಞಾನದ ಬುತ್ತಿ ಸಿದ್ದವಾಗುತ್ತದೆ ನಂತರ ಯಾವುದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೇಮಕಾತಿಯ ಪರೀಕ್ಷೆ ಬರೆದರೆ ಉನ್ನಯ ಹುದ್ದೆ ಸಿಗುವುದರಲ್ಲಿ ಯಾವುದೇ ರೀತಿ ಸಂಶಯವಿಲ್ಲ ಎಂದು ಮಹಾಲಕ್ಷ್ಮೀ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಸುರೇಶ ಹಿರೇಮಠ ರವರು ಸುಧೀರ್ಘವಾಗಿ ಅಭಿಪ್ರೇರಣೆಯ ನುಡಿಗಳನ್ನು ಹೇಳಿದರು.
ದಿನಾಂಕ:09-07-2023 ಹಾಗೂ 16-07-2023 ರಂದು ಪ್ರತಿ ರವಿವಾರದ ವಾರಾಂತ್ಯದ ಪರೀಕ್ಷೆಯಂತೆ ಈ ಪರೀಕ್ಷೆಯಲ್ಲಿ ಕುಮಾರ:ಪಂಕಜಕುಮಾರ ಹಾಗೂ ಕುಮಾರ:ರಘುರವರಿಗೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಗ್ರಂಥಾಲಯದ ನಿರ್ದೇಶಕರಾದ ಚಂದ್ರಶೇಖರ ಪಾಟೀಲ್ ಮತ್ತು ಉಪನ್ಯಾಸಕರಾದ ಸುರೇಶ ಹಿರೇಮಠರವರು ಸ್ಪರ್ಧಾ ಆಕಾಂಕ್ಷಿಗಳಿಗೆ ಗೌರವ ಸನ್ಮಾನವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಸುರೇಶ ಹಿರೇಮಠ,ಚಂದ್ರಶೇಖರ ಪಾಟೀಲ್,ಸೈಯದ ಪಟೇಲ್ ಶಹಾಪೂರ,ಅಂಬ್ರೇಶ್,ಭೀಮಾಶಂಕರ,ಉಮೇಶ,
ದುಂಡೇಶ ಅನೀಲ್,ಬಸ್ಸು ಹಾಗೂ ಸ್ಪರ್ಧಾರ್ಥಿಗಳು ಉಪಸ್ಥಿತರಿದ್ದರು.
ವರದಿ:ಚಂದ್ರಶೇಖರ ಪಾಟೀಲ್