ಸಿರುಗುಪ್ಪ : ತಾಲೂಕಿನ ಕೆ.ತಾಂಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವರ್ಗಾವಣೆಯಾಗಿದ್ದರೂ ಇಲ್ಲಿನ ಶಿಕ್ಷಕರಿಗೆ ಉಸ್ತುವಾರಿ ನೀಡದೇ ಶಾಲೆಯ 68 ಸಾವಿಕ್ಕೂ ಅಧಿಕ ಅಕ್ಷರ ದಾಸೋಹ ಹಣವನ್ನು ದುರ್ಬಳಕೆ ಮಾಡಿರುವ ಮುಖ್ಯಗುರು ರಂಗಸ್ವಾಮಿ ಅವರ ವಿರುದ್ದ ಸೂಕ್ರ ಕ್ರಮ ಜರುಗಿಸಬೇಕು, ಶಾಲೆಗೆ ಖಾಯಂ ಮುಖ್ಯಗುರುಗಳನ್ನು ನೇಮಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಪ್ರತಿಭಟನೆ ನಡೆಸಿ ಶಾಲೆಗೆ ಶಿಕ್ಷಣ ಸಂಯೋಜಕ ಪಂಪಾಪತಿ ಅವರಿಗೆ ಮನವಿ ಸಲ್ಲಿಸಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ತೋಟನಾಯ್ಕ್ ಮಾತನಾಡಿ ಈ ಹಿಂದೆ ಮುಖ್ಯಗುರುಗಳಾಗಿದ್ದ ರಂಗಸ್ವಾಮಿ ಅವರು ಪದೋನ್ನತಿ ಹೊಂದಿ ಪ್ರಸಕ್ತ ಮೇ.5ರಂದು ಶಾಲೆಯಿಂದ ಬಿಡುಗಡೆ ಹೊಂದಿ ಮುದ್ದಟನೂರು ಶಾಲೆಯ ಹಿರಿಯ ಮುಖ್ಯಗುರುಗಳಾಗಿದ್ದು, ಇಲ್ಲಿಯವರೆಗೆ ಶಾಲೆಯ ಹಿರಿಯ ಶಿಕ್ಷಕಿಗೆ ಮುಖ್ಯಗುರುಗಳ ಉಸ್ತುವಾರಿ, ಶಾಲಾ ಆಡಳಿತ ಮತ್ತು ಹಣಕಾಸಿನ ವ್ಯವಹಾರಗಳ ಜವಾಬ್ದಾರಿಯನ್ನು ನೀಡದಿರುವುದರಿಂದ ಶಾಲೆಯಲ್ಲಿ 15ದಿನಗಳಿಂದ ಬಿಸಿಯೂಟವನ್ನು ನಿಲ್ಲಿಸಲಾಗಿದೆ.
ಪ್ರತಿ ತಿಂಗಳು ತಾವೇ ಅಕ್ಷರದಾಸೋಹದ ಹಣವನ್ನು ಬ್ಯಾಂಕಿನ ಪಾಸ್ ಪುಸ್ತಕ ಮತ್ತು ನಗದು ಪುಸ್ತಕದಲ್ಲಿ ನಮ್ಮ ಹಾಗೂ ಮುಖ್ಯ ಅಡುಗೆದಾರರ ಸಹಿಯನ್ನು ತಾವೇ ನಕಲು ಮಾಡಿ ಹಣವನ್ನು ಬಿಡಿಸಿಕೊಂಡಿದ್ದು, ಸಂಬAದಿಸಿದ ಮೇಲಾಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರ ವಿರುದ್ದ ಸೂಕ್ತ ಕ್ರಮವನ್ನು ಕೈಗೊಂಡು ಶಾಲಾ ಆಡಳಿತ ಮತ್ತು ಹಣಕಾಸು ಜವಾಬ್ದಾರಿಯನ್ನು ಜವಾಬ್ದಾರಿಯನ್ನು ನಿರ್ವಹಿಸಲು ಶಾಲೆಗೆ ಖಾಯಂ ಮುಖ್ಯಗುರುಗಳನ್ನ ನೇಮಿಸಬೇಕೆಂದು ಒತ್ತಾಯಿಸಿದರು.
ಶಾಲೆಯ ಅಕ್ಷರ ದಾಸೋಹಕ್ಕೆ ನೇಕಾರ ಸರಸ್ವತಿ ಅವರು ಸ್ವಹಣವನ್ನು ಬಳಸುತ್ತಿರುವ, ಹಾಗೂ ಶಾಲೆಯ ಆಡಳಿತ ಮತ್ತು ಹಣಕಾಸು ವ್ಯವಹಾರಗಳ ಜವಾಬ್ದಾರಿ ಕೊಡಿಸುವಂತೆ ಕಛೇರಿಗೆ 5 ಸಲ ಮನವಿ ಸಲ್ಲಿಸಿದ್ದರೂ ಇದಕ್ಕೆ ಸಂಬAದಿಸಿದ ಹಿರಿಯ ಅಧಿಕಾರಿಗಳು ಗಮನವಹಿಸದಿರುವುದು ಹಣ ದುರ್ಬಳಕೆಯಲ್ಲಿ ಅವರೂ ಶಾಮೀಲಾಗಿರುವ ಶಂಕೆ ಗ್ರಾಮಸ್ಥರಲ್ಲಿ ವ್ಯಕ್ತವಾಗುತ್ತಿದೆ.
ಇದೇ ವೇಳೆ ಸಿ.ಆರ್.ಪಿ ಎಂ.ಟಿ.ಶಾAತ, ಹಿರಿಯ ಶಿಕ್ಷಕಿ ನೇಕಾರ ಸರಸ್ವತಿ, ಎಸ್.ಡಿ.ಎಂ.ಸಿ. ಸದಸ್ಯರು, ಹಾಗೂ ಗ್ರಾಮಸ್ಥರು ಇದ್ದರು.
2-ಸಿರುಗುಪ್ಪ-1 : ಸಿರುಗುಪ್ಪ ತಾಲೂಕಿನ ಕೆ.ತಾಂಡ ಗ್ರಾಮದ ಶಾಲೆಯಲ್ಲಿ ನಡೆದ ಅಕ್ಷರ ದಾಸೋಹ ಹಣ ದುರ್ಬಳಕೆ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮದ ಶಾಲೆಗೆ ಖಾಯಂ ಮುಖ್ಯಗುರುಗಳನ್ನು ನೇಮಕ ಮಾಡುವಂತೆ ಒತ್ತಾಯಿಸಿ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಗ್ರಾಮಸ್ಥರು ಶಿಕ್ಷಣ ಸಂಯೋಜಕ ಪಂಪಾಪತಿ ಅವರಿಗೆ ಮನವಿ ಸಲ್ಲಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.