ಕೊಟ್ಟೂರು:
ಕಾಂಗ್ರೇಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಿ.ಎಂ.ಸ್ಥಾನದ ಬಗ್ಗೆ ಹೇಳಿರುವುದು ನನ್ನ ಗಮನಕ್ಕೆ ಇಲ್ಲ ಯಾವ ಕಾಂಟೆಸ್ಟ್ನಲ್ಲಿ ಕುರಿತು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಯಾವುದೇ ವ್ಯಕ್ತಿಗೆ ಅಧಿಕಾರ ಕೊಡುವ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಸದ್ಯದ ಮಟ್ಟಿಗೆ ರಾಜ್ಯ ನಾಯಕತ್ವದ ಬಗ್ಗೆ ಪೂರ್ಣ ಪ್ರಮಾಣದ ವಿಶ್ವಾಸವಿದ್ದು ರಾಜ್ಯಾಡಳಿತ ಸುಗಮವಾಗಿ ಸಾಗಿರುವ ಬಗ್ಗೆ ಹೈಕಮಾಂಡ್‌ಗೆ ತೃಪ್ತಿ ಇದೆ ಎಂದು ಲೋಕಸಭಾ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದರು.
ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲವೇ ಇಲ್ಲ ಇದರ ಬದಲಾಗಿ ವಿರೋಧ ಪಕ್ಷವಾದ ಬಿಜೆಪಿಯಲ್ಲಿ ಗೊಂದಲಗಳಿವೆ. ಈ ಕಾರಣಕ್ಕಾಗಿ ಅವರಿಗೆ ಮತ್ತು ಅವರ ಪಕ್ಷದ ವರೀಷ್ಠರಿಗೆ ವಿರೋಧ ಪಕ್ಷದ ಉಭಯ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಸಭೆ ನಡೆಸಿದ್ದು ಬಿಜೆಪಿ ವಲಯದಲ್ಲಿ ತಳಮಳ ಉಂಟಾಗಿದೆ. ಈ ಕಾರಣದಿಂದ ಪ್ರಧಾನಿ ಮೋದಿಯವರು ಮಿತ್ರ ಪಕ್ಷಗಳವರನ್ನು ಭ್ರಷ್ಠರ ಕೂಟ ಎಂದು ಹೇಳಿದ್ದಾರೆ. ಮಿತ್ರ ಪಕ್ಷಗಳು ಮತ್ತು ಕಾಂಗ್ರೆಸ್‌ನವರು ಭ್ರಷ್ಠರಾಗಿದ್ದರೆ ೯ ವರ್ಷಗಳಿಂದ ಕೇಂದ್ರದ ಆಡಳಿತ ನಡೆಸುತ್ತಿರುವ ಮೋದಿಯವರು ಅವರ ವಿರುದ್ದ ಯಾಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಮರ್ಮವನ್ನು ಹೇಳಬೇಕು. ವಿರೋಧಿ ಬಣ ಬಲಗೊಳ್ಳುತ್ತಿರುವುದನ್ನು ಸಹಿಸಿಕೊಳ್ಳಲಾಗದೆ ಇಂತಹ ಅಸತ್ಯಗಳನ್ನು ಮೋದಿಯವರು ಹೇಳಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪುಗಳು ಇಲ್ಲವೇ ಇಲ್ಲ ಕಾಂಗ್ರೆಸ್ ಪಕ್ಷದಲ್ಲಿರುವುದು ಒಂದೇ ಗುರುತು ಪಕ್ಷ ಸಂಘಟನೆಯ ಗುಂಪು ಎಂದ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿರುವೆ ಎಂದು ಸೂಚ್ಯವಾಗಿ ಹೇಳಿದರು. ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ ಅವರು ಪಕ್ಷದೊಂದಿಗೆ ಸದಾ ಇರುತ್ತಾರೆ ಎಂದು ಅವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಬಳ್ಳಾರಿ ಗ್ರಾಮಾಂತರ ಅಧ್ಯಕ್ಷ ಬಿ.ವಿ.ಶಿವಯೋಗಿ ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ.ಹೆಚ್.ದೊಡ್ಡರಾಮಣ್ಣ, ಕಲ್ಯಾಣ ಕರ್ನಾಟಕ ಕಾರ್ಮಿಕ ವಿಭಾಗ ರಾಜ್ಯ ಉಪಾಧ್ಯಕ್ಷ ತಿಮ್ಮಣ್ಣ,ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ.ದಾರುಕೇಶ, ಕರವೇ ಅಧ್ಯಕ್ಷ ಎಂ ಶ್ರೀನಿವಾಸ್, ಶಿರಿಬಿ ಕೊಟ್ರೇಶ್,ಗೂಳಿ ಮಲ್ಲಿಕಾರ್ಜುನ, ಅಡಿಕೆ ಮಂಜುನಾಥ,ಇಂದ್ರಜಿತ್, ಬತ್ತನಹಳ್ಳಿ ಹಾಲಪ್ಪ, ಮತ್ತಿತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.