ಕಲಬುರಗಿ:ನಿನ್ನೆ ಬೆಳಗ್ಗೆ 11 ಗಂಟೆಗೆ ರಾಜ್ಯ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದು,46 ಜನ ರೈತರ ಆತ್ಮಹತ್ಯೆ,ಸಂವಿಧಾನ ವಿರೋಧಿ ನೀತಿ,ಬೆಲೆ ಏರಿಕೆ, ವಿರುದ್ಧ ಹಾಗೂ ಬೆಂಗಳೂರಿನಲ್ಲಿ ಬಂಧಿತ ಶಂಕಿತ ಭಯೋತ್ಪಾದಕರ ಕೇಸನ್ನು NIA ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಾಯಕರು ಬೃಹತ್
ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು,ಜಿಲ್ಲಾ ಪ್ರಮುಖರು,ಜಿಲ್ಲಾ,ಮಂಡಲ, ಮೋರ್ಚಾಗಳ,ಪದಾಧಿಕಾರಿಗಳು,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಮಾಜಿ ಶಾಸಕರು,ವಕ್ತಾರರಾದ ರಾಜಕುಮಾರ ಪಾಟೀಲ್ ತೆಲ್ಕುರ್,ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್,ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೆವಾಡಿ ಪ್ರಮುಖರಾದ ಮಣಿಕಂಠ ರಾಠೋಡ್,ಚಂದು ಪಾಟೀಲ್,ಶರಣಪ್ಪ ತಳವಾರ,ಲಿಂಗರಾಜ ಬಿರೆದಾರ,ಶಿವಯೊಗಿ ನಾಗನಹಳ್ಳಿ,ಶಶಿಕಲಾ ಟೆಂಗಳಿ,ಶೋಭಾ ಭಾಣಿ,ಶಿವನಾಂದ ಪಿಸ್ತಿ,ಸಂತೋಷ್ ಹಾದಿಮನಿ, ಚಂದ್ರಶೇಖರ ಪರಸ್ ರೆಡ್ಡಿ,ಬಾಬುರಾವ್ ಹಾಗರಗುಂಡಗಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ಅಪ್ಪಾರಾಯ ಬಡಿಗೇರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.