ಕೊಟ್ಟೂರು: ತಾಲೂಕು ಮಟ್ಟದ ಪತ್ರಕರ್ತರಿಗೆ ಮನೆ ಮತ್ತು ನಿವೇಶನ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ನೇಮಿರಾಜ್ ನಾಯ್ಕ್ ಹೇಳಿದರು.
ಪಟ್ಟಣದ ಬಾಲಾಜಿ ಕನ್ವೆನ್ಷನ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವರಿಗೆ ವಿಶೇಷ ಸನ್ಮಾನಿಸಲಾಯಿತು
ವಿಜಯನಗರ ಉಪಾಧ್ಯಕ್ಷ ಕಿಚಡಿ ಕೊಟ್ರೇಶ್ ಅವರು
ಕೆರೆಗಳ ತುಂಬಿಸುವ ಯೋಜನೆಗಾಗಿ ಇತ್ತೀಚಿಗೆ ಮಠಾಧೀಶರು, ಸಂಘ ಸಂಸ್ಥೆಗಳ ನೆರವಿನೊಂದಿಗೆ ಜಿಲ್ಲೆಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ರೈತಾಪಿ ವರ್ಗದ ಹಿತ ಕಾಪಾಡಲು ಮುಂದಾಗಿದ್ದರೂ ಸಮಾಜಮುಖಿಯಾಗಿ ಯುವ ಸಮೂಹದ ಬೆನ್ನೆಲುಬಾಗಿ
ನಿಂತು ಸದಾ ಕ್ರಿಯಾಶೀಲರಾಗಿ ನಿರ್ವಹಿಸುತ್ತಿದ್ದಾರೆ. ನೊಂದವರ ಬಾಳಿಗೆ ಬೆಳಕಾಗುವ ಇವರ ಕಾರ್ಯಗಳು
ಇಂದಿನ ಯುವ ಸಮೂಹಕ್ಕೆ ಸ್ಪೂರ್ತಿಯಾಗಿದ್ದಾರೆ. ಕಿಚಡಿ ಕೊಟ್ರೇಶ್ ಇವರ ಸೇವೆಗಳನ್ನು ಗುರುತಿಸಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಟ್ಟೂರು ತಾಲೂಕು ಘಟಕ ವತಿಯಿಂದ ಸನ್ಮಾನಿಸಿದರು.
ರಾಜ್ಯಪಾಲರಿಂದ ವಿಜೇತ ಶಿಲ್ಪಕಲಾ ಕ್ಷೇತ್ರದಲ್ಲಿ ಹೈದರಾಬಾದ್ ಕರ್ನಾಟಕ ಗುಲ್ಬರ್ಗ ರಾಜ್ಯಗಳಲ್ಲಿ ಪ್ರಶಸ್ತಿ ವಿಜೇತ ಸನ್ಮಾನಿತ ಕೆ ಅಯ್ಯನಹಳ್ಳಿ ವೀರೇಶ್ ಆಚಾರಿ
ಕೆ ಎಸ್ ಆರ್ ಪಿ ಪೊಲೀಸ್ ಅಧಿಕಾರಿಯಾಗಿ 35 ವರ್ಷಗಳ ಸೇವೆ ಸಲ್ಲಿಸಿ ತೆಲಂಗಾಣ ಜಮ್ಮು ಕಾಶ್ಮೀರ್ ನಕ್ಸಲೇಟ್,ವೀರಪ್ಪನ್ ಹಿಡಿಯುವಲ್ಲಿ ತಮ್ಮ ಪಾತ್ರ ಪ್ರಮುಖವಾಗಿ ಕಾರ್ಯವಹಿಸಿರುವ ಅಧಿಕಾರಿ ಇನ್ನೂ ಅನೇಕ ಹೊರ ರಾಜ್ಯಗಳಲ್ಲಿ ಸೇವೆಸಲ್ಲಿಸಿರುವ ಸನ್ಮಾನಿತ ಎಂ ಕೊಟ್ರೇಶ್
ಹಸಿರು ಹೊನಲು ತಂಡದ ಗುರುರಾಜ್ ಸಮಾಜಮುಖಿಯಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವ ದನ್ನು ಗುರುತಿಸಿ ಸನ್ಮಾನಿಸಲಾಯಿತು.
ಹಲವು ವರ್ಷಗಳಿಂದ ಉಚಿತವಾಗಿ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಹಾಲಿ ಸೈನಿಕ ಎಚ್ ಕೊಟ್ರೇಶ್ ಇವರು ತರಬೇತಿಯಲ್ಲಿ ಹಲವಾರು ವಿದ್ಯಾರ್ಥಿಗಳು ಆರ್ಮಿ ಮತ್ತು ಪಿಎಸ್ಐ ಯಾಗಿ ಸೇರ್ಪಡೆಗೊಂಡಿದ್ದಾರೆ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು
ಮಹಿಳಾ ಶಿಕ್ಷಕಿ ಅಲೆಮಾರಿ ಸಮುದಾಯದ ಅಡಿಯಲ್ಲಿ ಬರುವಂತಹ ಸಣ್ಣ ಸಮುದಾಯದಲ್ಲಿ ಬಡತನದಲ್ಲಿ ಬೆಳೆದು ಉನ್ನತ ಶಿಕ್ಷಣಕ್ಕೆ ಆಗಿನ ಕಾಲದಲ್ಲಿ ಶಿಕ್ಷಣದಲ್ಲಿ ಒತ್ತು ಕೊಟ್ಟು ಶಿಕ್ಷಕಿ ಆಗಿರುವುದು ಹೆಮ್ಮೆ ಬತ್ತನಹಳ್ಳಿ ಗಂಗಮ್ಮ ಶಿಕ್ಷಕಿ 25 ವರ್ಷಗಳ ಸೇವೆ ಸಲ್ಲಿಸಿರುವುದು ಗಮನಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮವನ್ನು ಪತ್ರಕರ್ತರಾದ ಎಸ್.ಎಂ.ಗುರುಪ್ರಸಾದ,ಬಿ.ಕೊಟ್ರೇಶ ನಿರ್ವಹಿಸಿದರು.