ಕೊಟ್ಟೂರು:
ಪಟ್ಟಣದ ಹರಪನಹಳ್ಳಿ ರಸ್ತೆ ಮರಿಕೊಟ್ಟೂರೇಶ್ವರ ದೇವಸ್ತಾನದಿಂದ ಬಸ್ ನಿಲ್ದಾಣದವರೆಗೆ ಸರ್ಕಾರದ ಅನುದಾನದಡಿಯಲ್ಲಿ ನೂತನ ರಸ್ತೆ ಮತ್ತು ವಿದ್ಯುತ್ ದ್ವೀಪದ ಕಂಬಗಳ ನಿರ್ಮಾಣ ಮಾಡಿದ್ದು ಈ ಕಂಬಗಳ ವಿದ್ಯುತ್ ತಂತಿಗಳನ್ನು ಕಂಬದ ಒಳಗೆ ಮುಚ್ಚುವುದು ಬಿಟ್ಟು ಈ ವಿದ್ಯುತ್ ದ್ವೀಪದ ಕಂಬದ ತಂತಿಗಳಿಗೆ ಹಲವಾರು ಕಡೆ ಪ್ಯಾಚ್ ಹಾಕಿ ತಂತಿಗಳನ್ನು ಹಾಗೆ ಹೊರಗೆ ಬಿಟ್ಟಿದ್ದಾರೆ ಈ ರಸ್ತೆ ಯಲ್ಲಿ ಒಡಾಡುವ ವಾಹನ ಸವಾರರಿಗೆ ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಕೈಗೆ ಸಿಗುವ ಹಾಗೆ ಇರುವ ಅಕಸ್ಮಿಕವಾಗಿ ಜನರಿಗೆ ಈ ವಿದ್ಯುತ್ ತಂತಿಗಳಿಂದ ಕಣ್ಣಿಗೆ ಕಾಣದ ವಿದ್ಯುತ್ ನಿಂದ ಸಾರ್ವಜನಿಕರ ಜೀವಕ್ಕೆ ವಿದ್ಯುತ್ ತಗುಲಿ ಅನಾಹುತಗಳು ಉಂಟಾಗುವ ಮೊದಲು ಈ ತಂತಿಗಳನ್ನು ಸಂಭಂದಪಟ್ಟ ಅಧಿಕಾರಿಗಳು ಕೂಡಲೇ ಎಚ್ಚತ್ತಿಕೊಂಡು ಈ ತಂತಿಗಳನ್ನು ವಿದ್ಯುತ್ ಕಂಬದ ಒಳಗಡೆ ಸರಿಪಡಿಸಿ ಸಾರ್ವಜನಿಕರನ್ನು ಈ ವಿದ್ಯುತ್ ತಂತಿಗಳಿಂದ ಅನಾಹುತಗಳು ಉಂಟಾಗದಂತೆ ಅಧಿಕಾರಿಗಳು ಕಾಪಡಬೇಕು ಇಲ್ಲವಾದರೆ ಸಂಬಂಧ ಪಟ್ಟ ಕಛೇರಿಯ ಮುಂದೆ ಉಗ್ರಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ಮಾನವಹಕ್ಕುಗಳ ಜನಾಸೇವಾ ಸಂಸ್ಥೆ (ನೋ.)ಕೊಟ್ಟೂರುತಾಲೂಕು ಅದ್ಯಕ್ಷರಾದ ಬಿ.ಸತೀಶ್ ಮತ್ತು ಪಧಾದಿಕಾರಿಗಳಾದ ಎಚ್.ವಿರುಪಾಕ್ಷಿ ,ಕೂಡ್ಲಿಗಿ ಸುರೇಶ್ ,ಜಬ್ಬೀರ್ ಸಾಹೇಬ್ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.