ಮುಂಡಗೋಡ : ಇಡೀ ತಾಲೂಕಿನ ಜನರ ಆರೋಗ್ಯ ಸರಿಪಡಿಸುವ ಮುಂಡಗೋಡ ದ ತಾಲೂಕ ಆಸ್ಪತ್ರೆಯ ಆರೋಗ್ಯವೇ ಸರಿ ಇಲ್ಲವೇನೋ ಎಂದೆನಿಸುತ್ತಿದೆ.
ಪ್ರತಿ ನಿತ್ಯ ಸುಮಾರು 90 ರಿಂದ 100 ಮಕ್ಕಳನ್ನು ಆರೈಕೆ ಮಾಡುತ್ತಿದ್ದ ಹಾಗೂ ಜನರಲ್ಲಿ ತಮ್ಮ ವೈದ್ಯ ವೃತ್ತಿ ಇಂದ ಮನ್ನಣೆ ಗಳಿಸಿದ ಶ್ರೀಶೈಲ ಮಾದಣ್ಣನವರ ಅವರು ಏಕಾಏಕಿ ರಾಜೀನಾಮೆ ನೀಡಿದ್ದು, ಸದ್ಯ ತಾಲೂಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರ ಕೊರತೆ ಉಂಟಾಗಿದೆ.
ರಾಜೀನಾಮೆಗೆ ಕಾರಣವೇನು?
ಆಸ್ಪತ್ರೆಯಲ್ಲಿ ಕೆಲ ಸಿಬ್ಬಂದಿಗಳಾದ ಅಕ್ರಮಗಳನ್ನು ಎತ್ತಿತೋರಿಸಿರುವ ಕಾರಣ ಕೆಲವರು ಶ್ರೀಶೈಲ ಅವರ ಕಾರ್ಯವೈಖರಿ ಬಗ್ಗೆ ಕೆಲವರು ಅಪಸ್ವರ ಎತ್ತಿರುವುದು ಹಾಗೂ ಅವರ ವಿರುದ್ಧ ವ್ಯವಸ್ತೆಯನ್ನು ಎತ್ತಿ ಕಟ್ಟುತ್ತಿರುವ ಕುರಿತು ಬೇಸರಗೊಂಡು
ಮಕ್ಕಳ ತಜ್ಞ ವೈದ್ಯರಾದ ಶ್ರೀಶೈಲ ಮಾದಣ್ಣನವರ ಅವರು ಏಕಾಏಕಿ ರಾಜೀನಾಮೆ ನೀಡಿದ್ದೇನೆ ಎಂದು ಕರುನಾಡ ಕಂದ ಪತ್ರಿಕೆ ಗೆ ಮಾಹಿತಿ ನೀಡಿದ್ದಾರೆ.
ಸುಧಾರಣೆ ಅಗಲ್ಲವೆ?
ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಲಂಚ ಪಡೆದ ಪ್ರಕರಣದ ಬಳಿಕ ವೈದ್ಯಾಧಿಕಾರಿ ಹುದ್ದೆ ಕಳೆದುಕೊಂಡ ಶಿವಕುಮಾರ್ ಅವರ ಬಳಿಕ ಪ್ರಭಾರಿ ತಾಲೂಕ ವೈದ್ಯಾಧಿಕಾರಿ ಹುದ್ದೆ ಪಡೆದ ನರೇಂದ್ರ ಪವಾರ್ ಅವರು ಎಲ್ಲಾ ಸಿಬ್ಬಂದಿಗಳ ವಿಶ್ವಾಸಕ್ಕೆ ತೆಗೆದುಕೊಂಡು ಸಿಬ್ಬಂದಿಗಳ ಸಭೆ ಮಾಡಿ ಆಸ್ಪತ್ರೆಯನ್ನು ಶಿಸ್ತಿನ ದಾರಿಯಲಿ ನಡೆಸಿಕೊಂಡು ಹೋಗುವ ವಿಶ್ವಾಸ ವ್ಯಕ್ತ ಪಡಿಸಿದ್ದರು ಆದರೆ ಆಸ್ಪತ್ರೆಗಳಲ್ಲಿ ವಿಭಿನ್ನ ರೀತಿಯ ಬಣಗಳು ಇರುವುದರಿಂದ ತಾಲೂಕ ವೈದ್ಯಾಧಿಕಾರಿಗಳು
ತಪ್ಪೇಸಗುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮೆಮೊ ನೀಡುವ ಮೂಲಕ ವ್ಯವಸ್ತೆಯನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ
ಸಾಕಷ್ಟು ಅವ್ಯವಹಾರ? ತಾಲೂಕ ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದೆ ಅದನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡಬೇಕಿದೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ಪತ್ರಿಕೆಯೊಂದಿಗೆ ವಿವರಿಸಿದರು.