ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗ್ರಾಮೀಣ ಪತ್ರಕರ್ತರಿಗೂ ಸರಕಾರಿ ಸೌಲಭ್ಯಗಳಿಗೆ ಒತ್ತಾಯಿಸುವೆ:ಶಾಸಕ ನೇಮಿರಾಜ್ ನಾಯ್ಕ್

ಅತಿ ಶೀಘ್ರದಲ್ಲಿ ಪತ್ರಿಕಾ ಭವನ ನಿರ್ಮಾಣ ಭರವಸೆ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಕೇಂದ್ರ ಹಾಗೂ ಹೋಬಳಿ ಕೇಂದ್ರಗಳಲ್ಲಿ ಪತ್ರಿಕೆಗಳಿಗಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಗೌರವಧನ ಸೇರಿ ಸರಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸುವುದಕ್ಕೆ ಮುಂದಿನ ವಿಧಾನಸಭೆ ಅವೇಶನದಲ್ಲಿ ಸರಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.
ಪಟ್ಟಣದ ಬಾಲಾಜಿ ಕನ್ವೆನ್‌ಷನಲ್ ಹಾಲ್‌ನಲ್ಲಿ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು ಸಮರ್ಪಕವಾಗಿರುವ ವ್ಯವಸ್ಥೆಯನ್ನು ಮೀರಿ ನಡೆಯುವ ಸರಕಾರಗಳ ವಿರುದ್ಧ ಪತ್ರಿಕೆಗಳು ನಿರ್ಭೀತಿಯಿಂದ ವರದಿ ಮಾಡಿದ ಪರಣಾಮವಾಗಿ ಕೆಲ ಪಕ್ಷಗಳು ಅಕಾರವನ್ನೇ ಕಳೆದುಕೊಂಡಿವೆ ನಗರ ಸೇರಿದಂತೆ ಹಳ್ಳಿಗಳಲ್ಲಿ ಸರಕಾರದ ಸೌಲಭ್ಯಗಳು ತಲುಪದೇ ಇದ್ದಾಗ ಅವುಗಳನ್ನು ಪತ್ರಿಕೆಗಳಲ್ಲಿ ವರದಿ ಮಾಡಿ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸವನ್ನು ಪರ್ತಕರ್ತರು ಮಾಡುತ್ತಿದ್ದಾರೆ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದಂತೆ ಪತ್ರಿಕಾ ರಂಗವೂ ದೇಶದಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಪತ್ರಿಕೆ ಕಚೇರಿಗಳಲ್ಲಿ ಹಾಗೂ ಜಿಲ್ಲಾ ವರದಿಗಾರರಿಗೆ ಸರಕಾರದ ಎಲ್ಲ ಸೌಲಭ್ಯಗಳು ಸಿಗುತ್ತಿವೆ ಆದರೆ ಕೆಲವೊಂದು ಸಾರಿ ಅಪಾಯವನ್ನೇ ಮೈಮೇಲೆ ಎಳೆದುಕೊಂಡು ವರದಿ ಮಾಡುವ ತಾಲೂಕು ಹಾಗೂ ಹೋಬಳಿ ಮಟ್ಟದ ಪತ್ರಕರ್ತರಿಗೆ ಯಾವುದೇ ಸುರಕ್ಷತೆಗಳಿಲ್ಲ ಇಂತಹ ಪತ್ರಕರ್ತರನ್ನು ಸರಕಾರ ಪರಿಗಣನೆಗೆ ತೆಗೆದುಕೊಂಡು ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ಅವಶ್ಯವಾಗಿದೆ. ಕ್ಷೇತ್ರದ ಹ.ಬೊ.ಹಳ್ಳಿ ಮತ್ತು ಕೊಟ್ಟೂರು ಪಟ್ಟಣಗಳಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದರು.ಜಿಪಂ ಮಾಜಿ ಸದಸ್ಯ ಹರ್ಷವರ್ಧನ ಮಾತನಾಡಿ ಪತ್ರಕರ್ತರು ವರದಿ ಮಾಡುವುದರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಹಾಗೂ ಹೋರಾಟಗಳಲ್ಲಿ ತೊಡಗಿಕೊಂಡಿದ್ದಾರೆ ಪತ್ರಕರ್ತರು ಕಾರ್ಯನಿರ್ವಹಿಸಲು ಅವಶ್ಯವಾಗಿ ಬೇಕಿರುವ ಪತ್ರಿಕಾ ಭವನ ನಿರ್ಮಾಣಕ್ಕೆ ಪ.ಪಂ.ವತಿಯಿಂದ ನಿವೇಶನ ಕಲ್ಪಿಸುವುದಾಗಿ ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ,ಕೊಟ್ಟೂರು ತಾಲೂಕಿನಲ್ಲಿನ ಪತ್ರಕರ್ತರು ಸಾಮಾಜಿಕ ಭದ್ಧತೆಯನ್ನು ಹೊಂದಿದ್ದಾರೆ. ತಾಲೂಕಿನಲ್ಲಿ ನಡೆಯುವ ಸಾಮಾಜಿಕ ಹೋರಾಟಗಳಲ್ಲಿ ಅವರು ಭಾಗಿಯಾಗಿದ್ದಾರೆ. ಪತ್ರಕರ್ತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ ಎಂದು ಹೇಳಿದರು.
ಪತ್ರಕರ್ತ ಪಾಟೀಲ್ ವೀರನಗೌಡ ವಿಶೇಷ ಉಪನ್ಯಾಸ ನೀಡಿದರು ಅಧ್ಯಕ್ಷತೆ ವಹಿಸಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಕೊಟ್ರೇಶ,ಮಾತನಾಡಿ ಪತ್ರಕರ್ತರು ನೇರವಾಗಿ ವರದಿ ಮಾಡಿದ ಕೂಡಲೇ ಅಧಿಕಾರಿ ವರ್ಗ ಹಾಗೂ ರಾಜಕೀಯ ಪ್ರಭಾವಿಗಳು ಪತ್ರಕರ್ತರ ನಿಷ್ಠುರವಾಗಿ ಬಿಂಬಿಸುತ್ತಾರೆ ಮತ್ತು ಪ್ರತಿ ಶಾಸಕರು ಆಶ್ವಾಸನೆಗಳು ಕಾರ್ಯಗತಕ್ಕೆ ಆಗದಿರುವುದು ಅಸಮಾಧಾನ ವ್ಯಕ್ತವಾಗಿದೆ ಈಗಲಾದರೂ ಕಾರ್ಯರೂಪಕ್ಕೆ ಪತ್ರಿಕಾ ಭವನ,ಖಾಲಿ ನಿವೇಶನಗಳು ನೀಡುವ ಬಗ್ಗೆ ಭರವಸೆ ನೀಡಿದರು ತಾಲೂಕು ಮತ್ತು ಗ್ರಾಮೀಣ ಮಟ್ಟದ ಪತ್ರಕರ್ತರಿಗೆ ಸೌಲಭ್ಯಗಳು ಒದಗಿಸುವ ಬಗ್ಗೆ ಸದನದಲ್ಲಿ ಚರ್ಚೆ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಜಿಪಂ ಮಾಜಿ ಉಪಾಧ್ಯಕ್ಷ ಪಿಎಚ್ ದೊಡ್ಡರಾಮಣ್ಣ, ಡಿಎಸ್‌ಎಸ್ ಮುಖಂಡ ಬಿ.ಮರಿಸ್ವಾಮಿ ಮಾತನಾಡಿದರು ಸಂಘದ ಜಿಲ್ಲಾ ಪದಾಧಿಕಾರಿಗಳಾದ ಕೆ.ಲಕ್ಷಣ,ವೆಂಕೋಬಿನಾಯ್ಕ,ಕಿಚಡಿ ಕೊಟ್ರೇಶ, ಎಂ.ರವಿಕುಮಾರ ಇದ್ದರು.
ಸಮಾರಂಭದಲ್ಲಿ

ವಿಶೇಷ ಸನ್ಮಾನ ಕಿಚಿಡಿ ಕೊಟ್ರೇಶ್ ಜಿಲ್ಲಾ ಉಪಾಧ್ಯಕ್ಷರಿಗೆ, ಶಿಲ್ಪಕಲಾಕಾರ ವಿರೇಶ್‌ಆಚಾರಿ, ಹಸಿರುಹೊನಲು ತಂಡದ ಎಸ್.ಗುರುರಾಜ, ನಿವೃತ್ತ ಪೊಲೀಸ್ ಅಕಾರಿ ಎಂ.ಕೊಟ್ರೇಶ, ಸೈನಿಕ ಎಚ್.ಕೊಟ್ರೇಶ,ಶಿಕ್ಷಕಿ ಗಂಗಮ್ಮರನ್ನು ಸಂಘದಿಂದ ಸನ್ಮಾನಿಸಲಾಯಿತು ಪತ್ರಕರ್ತರಾದ ಎಸ್.ಎಂ.ಗುರುಪ್ರಸಾದ, ಬಿ.ಕೊಟ್ರೇಶ ಕಾರ್ಯಕ್ರಮ ನಿರ್ವಹಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ