ಕೊಪ್ಪಳ/ಕಾರಟಗಿ:ಶುಕ್ರವಾರ ಸಿದ್ದರಾಮಯ್ಯ ಸರಕಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ರೈತರಿಗೆ ರೂ.3=00 ದರ ಹೆಚ್ಚು ಮಾಡುವುದರಿಂದ ತಾಲೂಕಿನ ಸಿಂಗನಾಳ ಗ್ರಾಮದ ಸಂಘದ ಅಧ್ಯಕ್ಷರಾದ ಗೌರಮ್ಮ ಗೋನಾಳ್ ರವರು ಸರಕಾರಕ್ಕೆ ಅಭಿನಂದನೆ ಸಲ್ಲಿಸುವ ಮೂಲಕ ವರದಿಗಾರರೊಂದಿಗೆ ಅವರು ಮಾತನಾಡಿದರು.
ಮಕ್ಕಳನ್ನು ತಾಯಿ ಹೇಗೆ ಪೋಷಿಸುತ್ತಾಳೋ ಹಾಗೇ ಹಾಲಿನ ಡೈರಿಗಳು ಕೂಡಾ ರೈತರನ್ನು ಪೋಷಿಸುತ್ತಿದ್ದು ರೈತರು ನೆಮ್ಮದಿಯಾಗಿ ಜೀವನ ಸಾಗಿಸಲು ಡೈರಿಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು ಹಳ್ಳಿಯಲ್ಲಿ ರೈತರಿಗೆ ಹೈನುಗಾರಿಕೆ ಬೆನ್ನೆಲುಬಾಗಿದೆ,ಸಣ್ಣ ಬಂಡವಾಳದಿಂದ ರೈತರು ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ,ಸರಕಾರದ ಪ್ರೋತ್ಸಾಹ ಧನ ಲೀಟರಿಗೆ ಸರಕಾರದಿಂದ ಐದು ರೂಪಾಯಿ ಅವರ ಖಾತೆಗೆ ನೇರವಾಗಿ ಜಮಾ ಆಗುತ್ತಿದೆ,ಒಕ್ಕೂಟಗಳಿಂದ ಸರಕಾರಕ್ಕೆ ಐದು ರೂಪಾಯಿ ಹೆಚ್ಚಳ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಮಾಡಲಾಯಿತು,ಆದರೆ ರೈತರಿಗೆ ಈಗ ಮಾಡಿರುವ ದರ 3ರೂ ತೃಪ್ತಿ ತಂದಿದೆ. ಆದರೆ ಹಾಲಿನ ಗುಣಮಟ್ಟದೊಂದಿಗೆ ಹಾಲಿನ ದರ ನಿಗದಿಪಡಿಸಲಾಗಿದೆ ಖಾಸಗಿ ಡೈರಿಯಲ್ಲಿ ರೈತರಿಗೆ ಪ್ರೋತ್ಸಾಹ ಧನ ಸೇರಿಸಿ ನೇರವಾಗಿ ಹಣ ಜಮಾ ಆಗುತ್ತಿದ್ದು,ಖಾಸಗಿ ಡೈರಿಗೆ ಯಾವುದೇ ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಹಾಲು ಸಂಗ್ರಹಣೆ ಮಾಡುತ್ತಿದೆ,ಕಲಬೆರಿಕೆ ಹಾಲು ಸಂಗ್ರಾಮ ಮಾಡುತ್ತಿದ್ದು,ರಾಜ್ಯದಲ್ಲಿ ಖಾಸಗಿ ಡೈರಿಗಳು ಹೆಚ್ಚಾಗಲು ಕಾರಣ ಸರಕಾರದ ನಿರ್ಲಕ್ಷ, ಸರಕಾರಿ ಅಧಿಕಾರಗಳ ಕರ್ತವ್ಯವನ್ನು ದುರ್ಬಳಕೆ ಮಾಡಿಕೊಳ್ಳದಿದ್ದರೆ,ರೈತರು ಖಾಸಿಗೆ ಡೇರಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಹಾಲು ಉತ್ಪಾದಕರ ಸಂಘಗಳ ಸರಕಾರದ ನಿಯಮಡಿಯಲ್ಲಿ ಹಾಲನ್ನು ಸಂಗ್ರಹಿಸಿ, ಬೆಲೆ ಏರಿಕೆ ಸಮ್ಮತಿಯ ನಡುವೆ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ರೈತರಿಗೆ ಹೆಚ್ಚಿನ ದರ ಕೊಡಲು ಸರಕಾರ ನಿರ್ಧರಿಸಿದೆ, ಸರಕಾರವು ಇನ್ನು ಕೆಲವು ನಿಯಮಗಳನ್ನು ಬದಲಾವಣೆ ಮಾಡಬೇಕಾಗಿದೆ ಹಾಲಿನ ಗುಣಮಟ್ಟದೊಂದಿಗೆ ಸರಕಾರದ ಇಲಾಖೆಯ ಪಶುಸಂಗೋಪನೆ ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ಸರಕಾರದ ಕಚೇರಿಗಳಲ್ಲಿ ಸಹಕಾರ ಸಂಘದ ರೈತರಿಗೆ ನೇರವಾಗಿ ಹೈನುಗಾರಿಕೆಯ ಸೌಲಭ್ಯವನ್ನು ದೊರಕಿಸಿ ಕೊಡಬೇಕು,ಸಂಘದ ಸಿಬ್ಬಂದಿ ವರ್ಗದವರಿಗೆ ಸರಕಾರದಿಂದ ಗೌರವಧನ ಧನ ನೀಡಬೇಕೆಂದರು ಸಿಂಗನಾಳ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀ ಮತಿ ಗೌರಮ್ಮ ಗೋನಾಳ್ ವರದಿಗಾರರಿಗೆ ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.