ರಾಮನಗರ/ದಾಸರಹಳ್ಳಿ:ಕರ್ನಾಟಕ ಬಹುಜನ ಚಳವಳಿ ರಾಮನಗರ ಜಿಲ್ಲಾಧ್ಯಕ್ಷರು ಹಾಗೂ ಸಾಮಾಜಿಕ ಹೋರಾಟಗಾರರಾದ ಮಾಗಡಿ ತಾಲ್ಲೂಕಿನ ನರಸಾಪುರದ ಕಿರಣ್ ಕುಮಾರ್ ಅವರ ದೂರಿನ ಮೇರೆಗೆ ಕಾಲ ಅವಧಿಯೊಳಗೆ ಮಾಹಿತಿ ನೀಡಿದ ಮಾಗಡಿ ತಾಲೂಕ ದಂಡಾಧಿಕಾರಿ (ತಹಶೀಲ್ದಾರ್) ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಸುರೇಂದ್ರ ಮೂರ್ತಿ ಅವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗದ ಮಾಹಿತಿ ಆಯುಕ್ತರಾದ ಕೆ.ಪಿ.ಮಂಜುನಾಥ ತೆರೆದ ನ್ಯಾಯಾಲಯದಲ್ಲಿ 15000 ರೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಅರ್ಜಿದಾರರು ಮಾಗಡಿ ತಾಲ್ಲೂಕ ಮಾಡಬಾಳ್ ಹೋಬಳಿ ಹಂಚಿಕುಪ್ಪೆ ಗ್ರಾಮದ ಸರ್ವೆ ನಂ.63/ಪಿ8 ರಲ್ಲಿ ಹೊಸೂರಯ್ಯ ಬಿನ್,ದೊಡ್ಡ ಮಲ್ಲಯ್ಯ ಎಂಬುವವರಿಗೆ 4 ಎಕರೆ,ಅ.ಓಠ. 28/77-78 ರಲ್ಲಿ ಮಂಜೂರಾಗಿದ್ದು ಇದರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಮಾಹಿತಿ ಹಕ್ಕಿನ ಅಡಿಯಲ್ಲಿ ಅಧಿಕಾರಿಯಾದ ತಾಲೂಕ ದಂಡಾಧಿಕಾರಿ ಸುರೇಂದ್ರ ಮೂರ್ತಿಯವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದ್ದರು.
ಆದರೆ ಇದಕ್ಕೆ ತಾಲೂಕ ದಂಡಾಧಿಕಾರಿ ಸಕಾಲಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಅವಲೋಕಿಸಿದ ಆಯೋಗವು ವಿಚಾರಣೆಗೆ ಗೈರು ಹಾಜರಾಗಿದ್ದರು ಹಾಗೂ ಆಯೋಗದ ಬಗ್ಗೆ ಅಸಡ್ಡೆ ತೋರಿರುವುದನ್ನು ಮನಗಂಡ ಆಯೋಗ ಗಂಭೀರವಾಗಿ ಪರಿಗಣಿಸಿ ಮಾಹಿತಿ ಹಕ್ಕು ಆಯೋಗವು ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಾಲೂಕ ದಂಡಾಧಿಕಾರಿ ಸುರೇಂದ್ರ ಮೂರ್ತಿ ಅವರಿಗೆ ಆಯೋಗ 15000/- ರೂ ಗಳ ದಂಡ ವಿಧಿಸಿ ಆದೇಶ ನೀಡಿ ದಂಡದ ಮೊತ್ತವನ್ನು ದಂಡಾಧಿಕಾರಿಗಳ ಸಂಬಳದಿಂದ ಕಡಿತಗೊಳಿಸಿ ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿಸುವಲ್ಲಿ ಸೂಕ್ತ ಕ್ರಮವಹಿಸುವಂತೆ ರಾಮನಗರ ಜಿಲ್ಲಾ ಜಿಲ್ಲಾಧಿಕಾರಿಗಳಾದ ಡಾ||ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ನಿರ್ದೇಶಿಸಿದೆ.
ವರದಿ ರಾಜಶೇಖರ ಮಾಲಿ ಪಾಟೀಲ್
