ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಿರವಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ 108 ಆಂಬುಲೆನ್ಸ್ ಸಿಬ್ಬಂದಿಯಾದ ವಾಹನ ಚಾಲಕ ಹಾಗೂ ನರ್ಸ್ ಕರ್ತವ್ಯ ಲೋಪದಡಿಯಲ್ಲಿ ಸೇವೆಯಿಂದ ಅಮಾನತುಗೊಳಿಸಲು ತಹಶೀಲ್ದಾರ ಕಚೇರಿಯ ಮುಂದೆ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಶಹಾಪುರ ಸಮಿತಿಯಿಂದ ದಿನಾಂಕ 24-7-2023 ರಂದು ಹೆರಿಗೆ ವಿಷಯವಾಗಿ ಆಂಬುಲೆನ್ಸ್ ಗೆ ಕರೆ ಮಾಡಿದ್ದೇವೆ 108 ಸಿಬ್ಬಂದಿ ಸಿರವಾಳ ಗ್ರಾಮದಿಂದ ಸಮಯ 11:40ಕ್ಕೆ ಹೊರಟು ಸುಮಾರು 12 ಗಂಟೆ 58 ನಿಮಿಷಕ್ಕೆ ಬಂದು ತಲುಪಿರುತ್ತದೆ ಕೊಲ್ಲೂರು ಗ್ರಾಮಕ್ಕೆ 12 ಕಿ.ಮೀ ಅಂತರವಿರುತ್ತದೆ 12 ಕಿಲೋಮೀಟರ್ ಅಂತರ ತಲುಪಲು ಅಂಬುಲೆನ್ಸ್ ಸಿಬ್ಬಂದಿ 1ಗಂಟೆ ಸಮಯ ತೆಗೆದುಕೊಂಡಿರುತ್ತಾರೆ ಹಾಗೂ ಗರ್ಭಿಣಿಯ ಸಂಬಂಧಿಕರೊಂದಿಗೆ ನಿರ್ಲಕ್ಷ್ಯತನ ತೋರಿ ಬೇಜವಾಬ್ದಾರಿಯಿಂದ ವರ್ತಿಸುವ ಮೂಲಕ ಮಗುವಿನ ಸಾವಿಗೆ ಕಾರಣರಾಗಿದ್ದಾರೆ.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಾವುಗಳು 108 ಸಿಬ್ಬಂದಿಯ ಚಾಲಕ ಮತ್ತು ನರ್ಸ್ ಕರ್ತವ್ಯ ಲೋಪದಡಿಯಲ್ಲಿ ವಿವರಗಳನ್ನು ಸೇವೆಯಿಂದ ಅಮಾನತುಗೊಳಿಸಿ ಹೆರಿಗೆ ಆಗಿ ಮಗುವನ್ನು ಕಳೆದುಕೊಂಡ ತಾಯಿಗೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಯಿಸಿ ದಿಢೀರನೆ ಭೀಮ್ ಆರ್ಮಿ ಸಂಘಟನೆಯಿಂದ ತಹಶಿಲ್ದಾರ ಕಚೇರಿ ಮುಂದೆ ಮಿಂಚಿನ ಪ್ರತಿಭಟನೆ ಮಾಡಿ ತಾಲೂಕ ತಹಶಿಲ್ದಾರರ ಮುಖಾಂತರ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.