ಸಿಂಧನೂರು ತಾಲೂಕಿನ 7ನೇ ಮೈಲಿ ಕ್ಯಾಂಪ್ ನ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಡೆಂಗ್ಯೂ ವಿರೋದಿ ಮಾಸಾಚರಣೆ ನಡೆಯಿತು.
ಡೆಂಗ್ಯೂ ವಿರೋಧಿ ಮಾಸಾಚರಣೆಯನ್ನು ಉದ್ದೇಶಿಸಿ ಆರೋಗ್ಯ ಸಂರಕ್ಷಣಾಧಿಕಾರಿ ಮೋದಿನ್ ಬೀ ಮಾತನಾಡಿ ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತುಕೊಂಡು ತಂಪಾದ ವಾತಾವರಣದಲ್ಲಿ ಸೊಳ್ಳೆಗಳು ಉತ್ಪಾನೆಯಾಗಿ ಡೆಂಗ್ಯೂ, ಮಲೇರಿಯಾದಂತಹ ರೋಗಾಣುಗಳು ಹರಡುತ್ತವೆ ನಂತರ ಒಬ್ಬರಿಂದೊಬ್ಬರಿಗೆ ಹರಡಲು ಪ್ರಾರಂಭಿಸುತ್ತವೆ ಆದ್ದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಮತ್ತು ಬಾಣಂತಿಯರು ಆಹಾರದ ಬಗ್ಗೆ,ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು,ಅಂಗನವಾಡಿ ಕೇಂದ್ರದಲ್ಲಿ ಬಂದು ಊಟ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಸುರೇಶ,ಪಂಚಾಯತಿ ಸದಸ್ಯರಾದ ಕೆ.ಅಪ್ಪಾರಾವ್,ಸೋಮನಾಥ ಎಚ್,ಊರಿನ ಹಿರಿಯರಾದ ನಿಂಗಪ್ಪ ನರೇಗಡದ, ಹನುಮಂತ,ಆಶಾಕಾರ್ಯಕರ್ತೆಯರಾದ ರೇಣುಕಾ,ಭಾಗ್ಯಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಶಾರದಾ,ನಾಗರತ್ನ,ಜಹೀರಾ ಉಪಸ್ಥಿತರಿದ್ದರು.