ತುಮಕೂರು ಜಿಲ್ಲೆ ತಿಪಟೂರು ನಗರದ ಸಮೀಪ ಹುಚ್ಚಗೊಂಡನಹಳ್ಳಿ ಬೈಪಾಸ್ ನಿಂದ ತಿಪಟೂರಿನ ಕೋಡಿ ಸರ್ಕಲ್ ವರೆಗೆ ರಾಷ್ಟ್ರೀಯ ಹೆದ್ದಾರಿ 72.390 km ನಿಂದ 82.445 km ವರೆಗೆ ಅಂದಾಜು ಹತ್ತು ಕಿಲೋಮೀಟರ್ ದ್ವಿಪಥ ರಸ್ತೆಯನ್ನು ಚತುಷ್ಪತ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 2006ನ್ನು ಚತುಷ್ಪತ ರಸ್ತೆಯಾಗಿ ಪರಿವರ್ತಿಸುವ ಕೆಲಸ ಈಗಾಗಲೇ ಪ್ರಗತಿಯಲ್ಲಿದ್ದು ತಾಲೂಕಿನ ಹುಚ್ಚಗೊಂಡನಹಳ್ಳಿ ಗ್ರಾಮದಿಂದ ಬೈಪಾಸ್ ಮೂಲಕ ನಗರದ ಹೊರವಲಯದಲ್ಲಿ ಬಂದು ಮಡೆನೂರು ಗೇಟಿನ ಬಳಿ ರಾಷ್ಟ್ರೀಯ ಹೆದ್ದಾರಿ 2006 ಕ್ಕೆ ಸೇರುತ್ತದೆ. ಹೀಗಾಗಿ ತಿಪಟೂರು ತಾಲೂಕಿ ಹುಚ್ಚಗೊಂಡನಹಳ್ಳಿ ಗ್ರಾಮದಿಂದ ತಿಪಟೂರು ನಗರದ ವರೆಗೆ ದ್ವಿಪಥ ರಸ್ತೆಯಾಗಿಯೇ ಉಳಿದಿತ್ತು.
ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಸ್ಥಳೀಯ ಶಾಸಕರು ಆದ ಶಿಕ್ಷಣ ಸಚಿವ ಬಿಸಿ ನಾಗೇಶ್ ಪಟ್ಟಣದ ಕೋಡಿ ಸರ್ಕಲ್ ನಿಂದ ಹುಚ್ಚಗೊಂಡನಹಳ್ಳಿ ಬೈಪಾಸ್ ವರೆಗೆ ಚತುಷ್ಪತ ಕಾಮಗಾರಿ ನಡೆಸಲಾಗುತ್ತದೆ ಇದಕ್ಕಾಗಿ ಹೆಚ್ಚುವರಿ ಭೂಸ್ವಾಧೀನದ ಅವಶ್ಯಕತೆ ಇಲ್ಲ ಎಂದರು.
ವರದಿ – ಮನು ತಿಪಟೂರು