ಕಲಬುರಗಿ ಜಿಲ್ಲೆಯ ಯಡ್ರಾಮಿಯ ಎ.ಪಿ.ಜೆ.ಅಬ್ದುಲ್ ಕಲಾಂ ನಗರ ಬಡಾವಣೆಯ ರಸ್ತೆ ಕಡೆ ಯಡ್ರಾಮಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸುವುದೇ ಇಲ್ಲ ಕೆಸರುಗದ್ದೆಯಂತೆ ಆಗಿರುವ ಈ ಬಡಾವಣೆ ಮಳೆಗಾಲ ಚಳೆಗಾಲ ಬೇಸಿಗೆಕಾಲ ಯಾವಾಗಲೂ ಇದೇ ತರ ಕೆಸರು ಗದ್ದೆಯಾಗಿರುತ್ತದೆ ಯಡ್ರಾಮಿ ಸಾರ್ವಜನಿಕರು, ಚಿಕ್ಕ ಮಕ್ಕಳು,ವೃದ್ಧರು ಈ ರಸ್ತೆಯಲ್ಲಿ ಸುಮಾರು ಸಾರಿ ಬಿದ್ದು ಎದ್ದು ಹಾಗೂ ಕೈ ಕಾಲು ಮುರಿದುಕೊಂಡಿರುವ ನಿದರ್ಶನಗಳೂ ಉಂಟು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎನ್ನುವ ಸರ್ಕಾರ ನೋಡಿ ಪಟ್ಟಣದ ರಸ್ತೆ ವ್ಯವಸ್ಥೆ ಹೇಗಿದೆ ಈ ಬಡಾವಣೆಯ ರಸ್ತೆಯನ್ನು ಸುಮಾರು 9 ವರ್ಷವಾದರೂ ಇದೇ ತರ ಯಡ್ರಾಮಿ ಪಟ್ಟಣದ ಎಪಿಜೆ ಅಬ್ದುಲ್ ಕಲಾಂ ಬಡಾವಣೆ ಈ ಬಡಾವಣೆಯ ಮುಖ್ಯ ರಸ್ತೆ ಸುಸಜ್ಜಿತವಾಗಿ ಒಂದು ತಿಂಗಳ ಒಳಗಾಗಿ ರಸ್ತೆ ದುರಸ್ತಿ ಮಾಡದೆ ಹೋದರೆ ಉಗ್ರವಾದ ಹೋರಾಟ ಮಾಡುವುದಾಗಿ ಯಡ್ರಾಮಿ ತಾಲೂಕ ಹೊಂಬೆಳಕು ಸಮಿತಿ ಅಧ್ಯಕ್ಷರಾದ ವಿಜಯಕುಮಾರ್ ಜೆ ಮಲ್ಲೆದವರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಹಾಗೂ ಜೇವರ್ಗಿ ಮತಕ್ಷೇತ್ರದ ಜನಪ್ರತಿನಿಧಿಗಳಿಗೆ ಎಚ್ಚರಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.