ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೋತಪೇಟ ಪ್ರೌಢಶಾಲೆಯಲ್ಲಿ ಅಗಸ್ತ್ಯ ಫೌಂಡೇಶನ್ ಸಂಚಾರಿ ಮತ್ತು ಹೋತಪೇಟ ಕೃಷಿ ಪೇಟ ವಿಜ್ಞಾನ ಕ್ಲಬ್ ಅಡಿಯಲ್ಲಿ ದಿನಾಂಕ 9/8/2023 ರಂದು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಜರಗಿತು.
ಸುಮಾರು 20 ಮಾದರಿಗಳು ಪ್ರದರ್ಶಿಸಲ್ಪಟ್ಟವು. ಕಲಿಕೆಗೆ ಪೂರಕವಾದ,ಸೃಜನಶೀಲ,ಕ್ರಿಯಾತ್ಮಕ ಕುತೂಹಲಕಾರಿಯಾದ ಪ್ರಯೋಗಾತ್ಮಕ ಕಲಿಕೆಗೆ ಪ್ರೇರಣೆಯಾದ ಪ್ರದರ್ಶನ ಇದಾಗಿತ್ತು ಈ ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಮಲ್ಲಣ್ಣ ಹುಲಿಕಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಗಸ್ತ್ಯ ಫೌಂಡೇಶನ್ ಅವರು ಎರಡು ದಿನಗಳವರೆಗೆ ಶಾಲೆಗೆ ಬಂದು ತಯಾರಿ ಮಾಡಿದ್ದು ತುಂಬಾನೇ ಸಹಕಾರಿಯಾಗಿತ್ತು ಅಧ್ಯಕ್ಷ ಸ್ಥಾನವನ್ನು ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಚನ್ನಬಸವರಾಜೇಶ್ವರಿ ವಹಿಸಿಕೊಂಡಿದ್ದರು.ಈ ಪ್ರದರ್ಶನವನ್ನು ಸ್ಥಳೀಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕೌತುಕದಿಂದ ವೀಕ್ಷಿಸಿದರು.ಈ ಸಂದರ್ಭದಲ್ಲಿ ಅಗಸ್ತ್ಯ ಫೌಂಡೇಶನ್ ಶಿಕ್ಷಕರಾದ ಶ್ರೀ ಭಾಷಾ ಪಟೇಲ್ ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಸವಿತಾ.ಎಸ್. ನಿರ್ವಹಿಸಿದರು.ಒಟ್ಟಾರೆ ಹೋತಪೇಟ ಶಾಲಾ ಮಕ್ಕಳಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳ ಅದ್ದೂರಿಯಾಗಿ ಆಚರಿಸಲಾಯಿತು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.