ಬಂಧುಗಳೇ
ಕೆಲವು ಜನ ಬಹಳ ದೊಡ್ಡ ದೊಡ್ಡದಾಗಿ ಮಾತನಾಡಿಬಿಡುತ್ತಾರೆ. ಆ ಮಾತುಗಳನ್ನು ಕೇಳಿದರೇ, ಅಬ್ಬಾ..!ಇವರು ಎಂಥಾ ದೊಡ್ಡ ವ್ಯಕ್ತಿ,ಎಷ್ಟೆಲ್ಲಾ ತಿಳಿದುಕೊಂಡಿದ್ದಾರೆ.ಇವರು ಬಹಳ ಎತ್ತರದಲ್ಲಿರೀವವರು ಎಂದು ಕಂಡುಬರುತ್ತದೆ.ಆದರೆ ಯಾವಾಗ ಅಂಥವರು ಸಣ್ಣವರನ್ನು ಮತ್ತು ಸಣ್ಣವರ ಸಣ್ಣ ಸಣ್ಣ ವಿಷಯಳಿಗೆ ತಾತ್ಸಾಸರ ಮಾಡುವರೊ ಆಗ ಅವರ ದೊಡ್ಡತನ ಬಯಲಾಗುತ್ತದೆ. ತಿಳಿದಿರಲಿ ಅಷ್ಟು ದೊಡ್ಡ ದೊಡ್ಡ ಮಾತನಾಡುವವರು ಇಂಥಹ ಸಣ್ಣಸಣ್ಣ ವಿಷಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಅವರೂ ಯಾತರದ ದೊಡ್ಡವರು.?ನೆನಪಿರಲಿ:ಏನು ಕಿಸಿಯದವರು ಕಿಸಿಯದಿರದವರು ಬಹಳವೇ ಕಿಸಿದವರ ಸ್ಥಾನದಲ್ಲಿರುತ್ತಾರೆ.ಆಯಾವೇಳೆಅವರೇ ಬಹಳ ದೊಡ್ಡವರು.ಹೀಗೆಯೇ ಕೆಲವು ಸಂದರ್ಭಗಳಲ್ಲಿ ಕೆಲವರು ಬಹಳ ದೊಡ್ಡವರೆನಿಸಿಕೊಂಡುಬಿಡುತ್ತಾರೆ.ಅದೇ ಆಳಕ್ಕಿಳಿದು ನೋಡಿ, ಅವರಲ್ಲಿನ ಚಾರಿತ್ರ್ಯ ತಾನೇ ಕಂಡುಬಿಡುತ್ತದೆ,ಬೆಟ್ಟದ ಹತ್ತಿರಕ್ಕೆ ಹೋದಾಗಲೇ ಅದರಲ್ಲಿರುವುದೆಲ್ಲಾ ಗೋಚರಿಸುವಂತೆ.ಸ್ಮರಣೆಯಲ್ಲಿರಲಿ;ಸಣ್ಣ ಸಣ್ಣ ಸಂಕಟಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಸರಿಯಾಗಿ ಸ್ಪಂದಿಸುವವರೆ ನಿಜವಾಗಿಯು ದೊಡ್ಡವರು.ಸುಮ್ಮನೆ ಅರ್ಥಮಾಡಿಕೊಂಡವರಂತೆ ಆಡುವವರಲ್ಲ.ಎಂದೆನ್ನುತ್ತಾರೆ ಅನುಭಾವಿ ಶರಣ ಸಂತರು.ಇದನ್ನರಿತು ನಡೆಯುವುದೇ ಭಗವತ್ ಕೃಪೆ.
-ವಿ ಪಿ ರಜಪೂತ