ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಂಗನಾಳ ಗ್ರಾಮದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು, ಕರ್ನಾಟಕ ರಕ್ಷಣಾ ವೇದಿಕೆಯಿಂದ ಧ್ವಜರಣವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರುದ್ರೇಶ್ ಬಿ ಧ್ವಜಾರೋಹಣವನ್ನು ನೆರವೇರಿಸಿದರು, ಶಾಲ ಮಕ್ಕಳಿಗೆ ಕೊಪ್ಪಳ ಜಿಲ್ಲೆಯ ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿ ಸಂಸ್ಥೆಯಿಂದ ಪ್ರಬಂಧ ಸ್ಪರ್ಧೆ ಮತ್ತು ಕೋಟಿ ಕಂಠ ಗಾಯನ ಸ್ಪರ್ಧೆಯನ್ನು ನಡೆಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆ ಶಿಕ್ಷಕರಾದ ಸೋಮರಾಜ್ ಮಾತನಾಡಿ ಕನ್ನಡ ನೆಲ ಜಲ ಒಂದೊಂದು ಕಲ್ಲಿನ ಶಿಲೆ ಕಥೆ ಹೇಳುತ್ತೇವೆ, ಎಂಬುದರ ಮೂಲಕ ಕನ್ನಡದ ಕಲಿಕೆ ಮತ್ತು ಅಭಿಮಾನ ಪೀಠಿಕೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಗೌಡ ಪಾಟೀಲ್, ಸುರೇಶ್ ಗೋನಾಳ್, ಕೊಪ್ಪಳ ಜಿಲ್ಲೆ ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಲ ನಿರ್ದೇಶಕರಾದ ಯಮನೂರ ಎಂ ಸಿಂಗನಾಳ, ಬಸವರಾಜ ಹೊಸಕೆರ, ರಮೇಶ ತಳವಾರ,ಶಾಲೆ ಎಸ್ ಡಿ ಎಂ ಸಿ ನಿರ್ದೇಶಕರಾದ ನಾಗೇಶ್ ಬೋವಿ, ಲಕ್ಷ್ಮಿ ವೆಂಕಟೇಶ್ ಬಿ , ಹನುಮೇಶ ಅಂಗಡಿ,ರಕ್ಷಣೆ ವೇದಿಕೆ ಅಧ್ಯಕ್ಷರಾದ ಮಲ್ಲನಗೌಡ ಮತ್ತು ವೇದಿಕೆಯ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಶಿಕ್ಷಕಿಯರು ಊರಿನ ಯುವಕರು ಭಾಗವಹಿಸಿದ್ದರು.
