ಗ್ರಾಮೀಣ ಮಟ್ಟದಲ್ಲಿರುವ ಮಹಿಳೆಯರಿಗಾಗಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ಮಹಿಳೆಯರಿಗಾಗಿ ಹಲವಾರು ವೈಯಕ್ತಿಕ ಕಾಮಗಾರಿಗಳಿದ್ದು ಅದರ ಸದುಪಯೋಗ ಪಡೆಯಿರಿ ಎಂದು ತಾಲೂಕು ಪಂಚಾಯತಿ ಐಇಸಿ ಸಂಯೋಜಕ ಸೋಮನಾಥ ನಾಯಕ ರವರು ಹೇಳಿದರು.
ಕೊಪ್ಪಳ ಜಿಲ್ಲೆ
ಗಂಗಾವತಿ:ತಾಲೂಕಿನ ಮರಳಿ ಗ್ರಾಮ ಪಂಚಾಯತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಡಿ.ಮಲ್ಲಾಪುರ ಕೆರೆ ಹೂಳೆತ್ತುವ ಕೆಲಸ ನೀಡಲಾಗಿದ್ದು ಕಾಮಗಾರಿ ಸ್ಥಳದಲ್ಲಿ ಆಯೋಜಿಸಲಾದ ರೋಜಗಾರ್ ದಿವಸ ಹಾಗೂ ಮಹಿಳಾ ಸಬಲೀಕರಣ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮ ಪಂಚಾಯತಿಯ ನರೇಗಾ ಯೋಜನೆಯಲ್ಲಿ ಶೇ.60 ರಷ್ಟು ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶದಿಂದ ಈ ಮಹಿಳಾ ಸಬಲೀಕರಣ ಅಭಿಯಾನ ಹಮ್ಮಿಕೊಂಡಿದ್ದು. ಕಾಮಗಾರಿ ಸ್ಥಳಗಳನ್ನು ಮಹಿಳೆ ಮತ್ತು ಮಕ್ಕಳ ಸ್ನೇಹಿಯಾಗಿ ಮಾಡಯವುದು. ಸ್ವಸಹಾಯ ಸಂಘಗಳು ನರೇಗಾದಲ್ಲಿ ಭಾಗವಹಿಸುವಿಕೆ ಉತ್ತೇಜಿಸಿ, ಮಹಿಳೆಯರನ್ನು ಪ್ರೇರೇಪಿಸುವದಿಂದ ಸಲುವಾಗಿ ಈ ಮಹಿಳಾ ಸಬಲೀಕರಣ ಆರಂಭಿಸಿದ್ದು, ಮಹಿಳೆಯರು ಯೋಜನೆಯ ಸದುಪಯೋಗ ಪಡೆಯುವುದರೊಂದಿಗೆ ಸ್ವಾವಲಂಬನೆ ಜೀವನವನ್ನು ಸಹ ಮಾಡಬಹುದಾಗಿದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಸಾಕಷ್ಟು ಯೋಜನೆಗಳು ಮಹಿಳೆಯರಿಗಾಗಿ ಇದ್ದು. ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ನೀಡಿರುವುದರೊಂದಿಗೆ ಅಂತವರನ್ನು ಸಬಲರನ್ನಾಗಿ ಮಾಡುವ ಕಾರ್ಯಕ್ಕೆ ಮುಂದಾಗಿ ಎಂದರು.
ನಂತರ ಯೋಜನೆಯಡಿ ಯೋಜನೆಯಲ್ಲಿ ಮಹಿಳೆಯರು ವ್ಯಯಕ್ತಿಕವಾಗಿ ದನ, ಕುರಿ-ಮೇಕೆ, ಹಂದಿ, ಕೋಳಿ ಸಾಕಾಣಿಕೆ ಶೇಡ್ ಗಳನ್ನು ನಿರ್ಮಾಣ ಮಾಡಿಕೊಳ್ಳುವಂತೆ ಯೋಜನೆ ಮಾಹಿತಿ ನೀಡಿದರು.
ಈ ವೇಳೆ ಗ್ರಾಮ ಪಂಚಾಯತಿ ಬಿಎಫ್ಟಿ ವಿರುಪಣ್ಣ ಬಯ್ಯಾಪುರ ಗ್ರಾಮ ಕಾಯಕ ಮಿತ್ರರಾದ ನಾಗಮ್ಮ, ಮಹಿಳಾ ಕೂಲಿಕಾರರಾದ ಕಮಲಾಕ್ಷೆಮ್ಮ, ಯಲ್ಲಮ್ಮ, ರೇಣುಕಮ್ಮ, ನಾಗಮ್ಮ, ಶಾರದಮ್ಮ ಸೇರಿ ಇನ್ನಿತರರು ಇದ್ದರು.