ಗಂಗಾವತಿಯ ಇಲಾಹಿ ಕಾಲೋನಿಯ ಟಿ.ಎಂ.ಎ.ಇ ಬಿ ಈಡಿ ಕಾಲೇಜಿನಲ್ಲಿ ಇಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರೇರಣಾ ತರಬೇತಿ ಕಾರ್ಯಗಾರವನ್ನು ಮಾನ್ಯ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಫೌಜೀಯಾ ತರನ್ನುಮ್ ಮೇಡಂ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಸ್ಥಳೀಯ ಸರಕಾರಿ ಮತ್ತು ಪ್ರೌಢ ಶಾಲೆಗಳ ಮಕ್ಕಳಿಗೆ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಮತ್ತು ಭಯ ನಿವಾರಣೆ, ಎಪ್ರಿಲ್ ತಿಂಗಳಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಮಕ್ಕಳ ತಯಾರಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹಾಗೂ ಸಮಯದ ಮಹತ್ವ ಮತ್ತು ಅಧ್ಯಯನದ ಪ್ರಾಮುಖ್ಯತೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಿಡಿಪಿಐ ರಡ್ಡೇರ್, ಬಿಇಓ ಸೋಮಶೇಖರ್ ಗೌಡ,ಬಿಆರ್ ಸಿ ಮತ್ತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಪ್ರೌಢ ಶಾಲಾ ಮುಖ್ಯ ಗುರುಗಳು ಸಂಪನ್ಮೂಲ ಶಿಕ್ಷಕರು ಬಿ ಈಡಿ ಕಾಲೇಜಿನ ಪ್ರಾಂಶುಪಾಲ ಕುಲಕರ್ಣಿ, ಶಿಕ್ಷಣ ಸಂಯೋಜಕ ರಾಘವೇಂದ್ರ, ವಿಧ್ಯಾರ್ಥಿಗಳು ಸೇರಿ ಇತರರು ಹಾಜರಿದ್ದರು.