ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿ, ಹಾಗೂ ತಾಲೂಕು ಸ್ವೀಪ್ ಸಮಿತಿ ಗಂಗಾವತಿ ಇವರ ಸಹಯೋಗದಲ್ಲಿ ಇಂದು ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವು ತಾ.ಪಂ ಇಒ ಮಹಾಂತಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಜರುಗಿತು.
ಕಾರ್ಯಕ್ರಮ ಉದ್ದೇಶಿಸಿ ತಾ.ಪಂ ಇಒ ಮಹಾಂತಗೌಡ ಪಾಟೀಲ್ ಮಾತನಾಡಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಐದು ವರ್ಷಕೊಮ್ಮೆ ಸಾರ್ವತ್ರಿಕ ಚುನಾವಣೆಗಳು ಬರುತ್ತಿದ್ದು ನಮಗೆಲ್ಲ ತಿಳಿದಿರುವ ವಿಷಯ. ಮತದಾನ ಮಾಡುವುದು ನಮ್ಮ ಹಕ್ಕು, 1992 ರಿಂದ ಭಾರತದಲ್ಲಿ ಈ ಮತದಾರರ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಮತದಾನದಿಂದ ಯಾರು ವಂಚಿತರಾಗದೆ ನಮ್ಮ ಅಮೂಲ್ಯವಾದ ಮತದಾನವನ್ನು ಮಾಡಬೇಕು. ಹಾಗೇ ಯುವ ಮತದಾರರು ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಿ, ಮುಂದಿನ ಯುವಕರಿಗೆ ಸ್ಪೂರ್ತಿ ನೀಡಿ ಎಂದರು ನಂತರ ಕಾಲೇಜ್ ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜ್ ಪ್ರಾಂಶುಪಾಲರಾದ ಶಾಂತಪ್ಪ ಟಿ.ಸಿ,ಬಸಪ್ಪ ನಾಗೋಲಿ,ತಾ.ಪಂ ಸಾಮಾಜಿಕ ಪರಿಶೋಧನೆ ಸಂಯೋಜಕ ವೀರನಗೌಡ, ಐಇಸಿ ಸಂಯೋಜಕ ಸೋಮನಾಥ ನಾಯಕ,ವಿಷಯ ನಿರ್ವಾಹಕ ಸಂತೋಷ ಸೇರಿ ಕಾಲೇಜಿನ ಉಪನ್ಯಾಸಕರು,ವಿಧ್ಯಾರ್ಥಿಗಳು ಇದ್ದರು.