ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲ್ಲೂಕಿನ ಯುವಕ ಪ್ರಶಾಂತ ಕೋತಿಗಳಿಗೆ ಹಣ್ಣು ಹಂಪಲು ನೀಡುವ ಮೂಲಕ ತನ್ನ ಹುಟ್ಟುಹಬ್ಬವನ್ನು ವಿಶೇಷ ವಾಗಿ ಆಚರಿಸಿ ಕೊಂಡಿರುವದು ನಿಜಕ್ಕೂ ಗೆಳೆಯರಿಗೆ ಖುಷಿ ತಂದಿದೆ.ಯಾಕಂದರೆ ಇತ್ತೀಚಿನ ದಿನಗಳಲ್ಲಿ ದಾನ ಧರ್ಮ ಎಂಬುದು ಎಲ್ಲಾ ಜನಗಳಿಗೆ ಸುಖದ ಸುಪ್ಪತ್ತಿಗೆಯಲ್ಲಿ ಮರೆತು ಹೋಗಿದೆ ಎಂದರೆ ತಪ್ಪಾಗಲಾರದು ಆದರೆ ಇವಾಗ ಹುಟ್ಟುಹಬ್ಬ ಬಂದರೆ ಸಾಕು ಸಾವಿರಾರು ದುಡ್ಡು ಖರ್ಚು ಮಾಡಿ ಕೇಕ್ ತರಿಸಿ,ಮತ್ತೆ ಗೆಳೆಯರನ್ನು ಕೂಡಿಸಿ,ಮೋಜು,ಮಸ್ತಿ ಮಾಡೋದು ಒಂದು ಶೋಕಿ ಆಗಿದೆ,ಒಂದು ದಿನದ ಹುಟ್ಟುಹಬ್ಬದ ಸಲುವಾಗಿ ಸಾವಿರಾರು ದುಡ್ಡು ಖರ್ಚು ಮಾಡಿ ಪಾರ್ಟಿ ಕೊಡೋದು ಕೂಡ ನಾವು ಎಲ್ಲ ಕಡೆ ನೋಡಬಹುದು, ಆದ್ರೆ ಇಲ್ಲೊಬ್ಬ ಪ್ರಾಣಿ ಪಕ್ಷಿಗಳ ಪ್ರೇಮಿ ತನ್ನ ಹುಟ್ಟು ಹಬ್ಬದ ದಿನದ ಅಂಗವಾಗಿ ಲಿಂಗಸೂಗೂರ ಹತ್ತಿರ ಜಲದುರ್ಗ ಎಂಬ ಹಳೆಯ ಕೋಟೆಯ ಊರಿದೆ,ಇಲ್ಲಿನ ವಿಶೇಷ ಅಂದರೆ ಸುಂದರವಾದ ಕೋಟೆ ಮತ್ತು ಪ್ರೇಕ್ಷಣಿಯ ಸ್ಥಳವೂ ಕೂಡಾ ಹೌದು ಸೌಂದರ್ಯ ಸೊಬಗು ತನ್ನ ಮಾಡಲಲ್ಲಿ ಹಿಡಿದು ಕುಳಿತಂತೆ,ಪ್ರವಾಸಿಗರನ್ನ ಕೈ ಮಾಡಿ ಕರೆಯುವ ಹಾಗೆ ಇದೆ ಈ ಸುಂದರ ತಾಣ ಹಾಗೂ ಇಲ್ಲಿನ ಸೌಂದರ್ಯ ಸೊಬಗು ಮಾತಲ್ಲೇ ವರ್ಣಿಸಿದರೆ ಸಾಲದು ಒಮ್ಮೆ ಭೇಟಿ ಕೊಟ್ಟು ನೀವೇ ನೋಡಿ ಈ ಸ್ಥಳದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕೋತಿಗಳು ಹಾಗೂ ನವಿಲುಗಳು ಇನ್ನೂ ಮುಂತಾದ ಪ್ರಾಣಿ ಪಕ್ಷಿಗಳು ಇದ್ದು ಇವುಗಳಿಗೆ ಬೇಸಿಗೆ ಸಂದರ್ಭದಲ್ಲಿ ಇವುಗಳಿಗೆ ಈ ಅರಣ್ಯ,ಗುಡ್ಡದಲ್ಲಿ ಆಹಾರ ಸಿಗದಿರುವದು ಬೇಸರದ ಸಂಗತಿ ಆದರೆ ಹುಟ್ಟಿಸಿದ ದೇವರು ಹುಲ್ಲು ಮೇಯಿಸುವದಿಲ್ಲ ಅನ್ನೋ ಗಾದೆ ಮಾತು ಸುಳ್ಳಲ್ಲ ಎಲ್ಲಾ ಕೋಟಿ ಜೀವರಾಶಿಗಳಿಗೂ ಆಹಾರ ಸಿಗುವ ಹಾಗೆ ದೇವರು ಸೃಷ್ಟಿ ಮಾಡಿರುತ್ತಾನೆ ಆದರೆ ಈ ಯುವಕ ತನ್ನ ಹುಟ್ಟುಹಬ್ಬವನ್ನು ಕೋತಿಗಳಿಗೆ ಇಷ್ಟವಾದ ಬಾಳೆ ಹಣ್ಣು ಕೊಟ್ಟು ಯಾವುದೇ ಕೇಕ್ ಕಟ್ ಮಾಡದೇ ಹಾಗೂ ಪಾರ್ಟಿ ಮೋಜು ಮಸ್ತಿ ಮಾಡದೆ,ವಿಶೇಷ ವಾಗಿ ತನ್ನ ಹುಟ್ಟು ಹಬ್ಬವನ್ನು ಅಚರಿಸಿಕೊಂಡಿರುವುದು ನಿಜಕ್ಕೂ ಒಳ್ಳೆಯ ಸಂಗತಿ ಕರುನಾಡ ಕಂದ ಪತ್ರಿಕೆ ಜೊತೆ ಮಾತನಾಡಿದ ಪ್ರಶಾಂತ ಅವರು ನಾನು ಹುಟ್ಟು ಹಬ್ಬದ ಸಲುವಾಗಿ ಇವುಗಳಿಗೆ ಆಹಾರ ನೀಡಿಲ್ಲ ಬೇಸಿಗೆಯಲ್ಲಿ ಇವುಗಳಿಗೆ ಹೊಟ್ಟೆ ತುಂಬಾ ಆಹಾರ ಸಿಗೋದಿಲ್ಲ ಅದಕ್ಕಾಗಿ ತಿಂಗಳಲ್ಲಿ ಎರಡು ಮೂರು ಬಾರಿ ಹಣ್ಣು ತಂದು ಕೊಟ್ಟು ಹೋಗ್ತೀನಿ ಇದರಲ್ಲಿ ಸಿಗುವ ಖುಷಿ ನಿಜವಾಗಿಯೂ ಎಲ್ಲಿಯೂ ಸಿಗುವದಿಲ್ಲ ಮತ್ತೆ ಎಲ್ಲರೂ ಕೂಡಾ ಪ್ರಾಣಿ ಪಕ್ಷಿಗಳನ್ನು ಸಂರಕ್ಷಣೆ ಮಾಡಬೇಕು ಯಾಕಂದರೆ ಅವುಗಳಿಗೆ ದುಡ್ಡು ಕೊಟ್ಟರೆ ಆಹಾರ ಸಿಗುತ್ತೆ ಅಂತ ಗೊತ್ತಿಲ್ಲ ಎಂದು ಮನಸ್ಸಿಗೆ ಮುಟ್ಟೋ ಹಾಗೆ ಹೇಳಿದ್ದು ವಿಶೇಷ ವಾಗಿ ಕಂಡು ಬಂತು ಹಾಗೂ ಇದಕ್ಕೆ ಮೂಲ ಕಾರಣರು ನನ್ನನ್ನು ಮುನ್ನಡೆಸುವ ನಡೆದಾಡುವ ದೇವರು ಶ್ರೀ ಅಂಕಲಿ ಮಠದ ಶ್ರೀ ಬಸವರಾಜಪ್ಪ ತಾತ ಹೇಳಿದ ದಾರಿಯಲ್ಲಿ ನಾನು ನಡೆಯುತ್ತಿದ್ದು ಅವರು ಯಾವಾಗಲೂ ದಾನ ಧರ್ಮ ಮಾಡುಬೇಕು,ಹಸಿದವರಿಗೆ ಅನ್ನ ಕೊಡ್ಬೇಕು,ಯಾರಿಗೂ ಮೋಸ ಮಾಡದೇ ಸತ್ಯ ದಾರಿಯಲ್ಲಿ ನಡೀಬೇಕು, ಅಂತ ಹೇಳಿದ್ದಾರೆ ಅದಕ್ಕಾಗಿ ನಾನು ನನ್ನಿಂದ ಎಷ್ಟು ಆಗುತ್ತೋ ಅಷ್ಟು ಒಳ್ಳೆ ಕಾರ್ಯ ಮಾಡಿಕೊಂಡು ಹೋಗ್ತಾ ಇದೀನಿ ಅಂತ ಹೇಳಿದರು.ಹುಟ್ಟಿದ ಹಬ್ಬದ ಈ ಸಂದರ್ಭದಲ್ಲಿ ಗೆಳೆಯರು ಎಲ್ಲರೂ ಶುಭಾಶಯಗಳು ತಿಳಿಸಿ ಇನ್ನೂ ಹೆಚ್ಚಿನ ಒಳ್ಳೆಯ ಕಾರ್ಯಗಳು ಇವರಿಂದ ಆಗಲಿ ಎಂದು ಮತ್ತೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಪ್ರಶಾಂತ ಅಂತ ಹೇಳಿ ಖುಷಿ ವ್ಯಕ್ತಪಡಿಸಿದರು ಈ ಸಮಯದಲ್ಲಿ ವಿರೇಶ ಹಿರೇಮಠ,ಸುಗೂರೇಶ ಹೊನ್ನಳ್ಳಿ, ಸಿದ್ದಯ್ಯಸ್ವಾಮಿ ಹಿರೇಮಠ, ಮಹೇಶಕುಮಾರ ಕಟ್ಟಿಮನಿ,ಸಂದೀಪ ವಿನ್ಸ್ ಕಂಪ್ಯೂಟರ್,ಸುನಿಲ್ ಬೇಕರಿ ಶುಭಾಶಯ ತಿಳಿಸಿದರು.
-ಪುನೀತ ಕುಮಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.