ಯಾದಗಿರಿ:ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಯಾದಗಿರಿ ಜಿಲ್ಲೆ ಮೂರು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ಈಗ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ವೇಳೆಯಲ್ಲಿ ಪಕ್ಷ ವಿರೋಧ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕೆಲ ಶ್ರೀ ಮುಖಂಡರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಈಗ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಮಾಣಿಕರಡ್ಡಿ ಕುರಕುಂದಿ, ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಜಹೀರುದ್ದೀನ್ ಸವೇರಾ, ಪ್ರಮುಖರಾದ ಸಂತೋಷ್ ನಿರ್ಮಲಕರ್, ಭೀಮರಾಯ ನಾಯ್ಕಲ್, ಮಲ್ಲು ಶಿವಪುರ, ಹೊನ್ನಪ್ಪ ಮುಸ್ಟೂರ, ವಿಜಯಕುಮಾರ ಶಿರಗೋಳ, ಇವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಇವರಲ್ಲಿ ಕೆಲವರು ಪಕ್ಷೇತರ ಅಭ್ಯರ್ಥಿ ಹಾಗೂ ಒಳಗೊಳಗೆ ಬೇರೆ ಪಕ್ಷದ ಪರ ಕೆಲಸ ಮಾಡಿದ್ದು ಆದರೆ ಕೆಲ ನಿಷ್ಠಾವಂತರನ್ನೂ ಕಾರ್ಯಕರ್ತರನ್ನು ಬಲಿ ಕೊಡಲಾಗಿದೆ. ಎಂಬ ಆರೋಪ ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿದೆ.
ಚುನಾವಣೆ ಸಮಯದಲ್ಲಿ ಯಾದಗಿರಿ ಜಿಲ್ಲೆಯ ಮೂರೂ ಕ್ಷೇತ್ರಗಳಲ್ಲಿ ಪೈಕಿ ಯಾದಗಿರಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಅಲ್ಲದೆ ಕ್ಷೇತ್ರದಿಂದ 17 ಆಕಾಂಕ್ಷಿಗಳು ತಮಗೆ ಟಿಕೆಟ್ ಕೊಡುವಂತೆ ಕೆಪಿಸಿಸಿಗೆ ತಲಾ 2 ಲಕ್ಷ ರೂಪಾಯಿ ನೀಡುವ ಮೂಲಕ ಅರ್ಜಿ ಸಲ್ಲಿಸಿದ್ದರು.ಕೊನೆಯ ಕ್ಷಣದಲ್ಲಿ ಎಐಸಿಸಿ ಅಧ್ಯಕ್ಷ ಪರಮಾಪ್ತ ಚನ್ನಾರಡ್ಡಿ ಪಾಟೀಲ್ ತುನ್ನೂರು ಅವರಿಗೆ ಅವಕಾಶ ನೀಡಲಾಯಿತು.ಬೆನ್ನಲ್ಲೇ ಪಕ್ಷದಲ್ಲಿನ ಅನೇಕರು ತಮ್ಮ ಅಭ್ಯರ್ಥಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳುತ್ತಿದ್ದ ಕೆಲವರು ಹಿಂದಿನಿಂದ ನಮ್ಮ ಅಭ್ಯರ್ಥಿ ಸೋಲುತ್ತದೆ. ಹೀಗಾಗಿ ನಿಮ್ಮ ಮಾತುಗಳು ಯಾರಿಗಾದರೂ ಮತ ನೀಡಿ ಎಂದು ಹೇಳಿದವರು ಇದ್ದಾರೆ. ಆದರೆ ಅಂಥವರ ವಿರುದ್ಧ ಕ್ರಮಕ್ಕೆ ಮುಂದಾಗದ ಜಿಲ್ಲಾ ಹೈಕಮಾಂಡ್, ಧ್ವನಿ ಇಲ್ಲದವರ ವಿರುದ್ಧ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿ ಪಕ್ಷದ ನಿಷ್ಠಾವಂತರ ಕೆಂಗಣ್ಣಿಗೆ ಗುರಿಯಾಗಿದೆ.
ಎ.ಬಿ.ಮಾಲಕರಡ್ಡಿ ಕಾಂಗ್ರೆಸ್ ಪಕ್ಷ ತೊರೆದು ನಂತರ ಕಾಂಗ್ರೆಸ್ ನಲ್ಲಿ ಈಗ ನಾಯಕತ್ವದ ಕೊರತೆ ಎದುರಾಗಿತ್ತು. ಆ ವೇಳೆ ಕಾರ್ಯಕರ್ತರನ್ನು ಹಿಡಿದು ಇಟ್ಟುಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಬಿಜೆಪಿ ವಿರೋಧಿ ಅಲೆ ಸೇರಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಥಳೀಯರು ಮತ್ತು ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಆದಾರದ ಮೇಲೆ ಪಕ್ಷ ಇಂದು ಮೂರು ಕ್ಷೇತ್ರಗಳಲ್ಲಿ ಜಯ ಸಾಧಿಸಿರುವುದನ್ನ ಹೊರತು ಪಡಿಸಿದರೆ ಲೋಕಲ್ ಲೀಡರಗಳು ಏನು ಮಾಡಿದ್ದಾರೆ ಎಂಬುದು ಪಕ್ಷನಿಷ್ಠರ ಪ್ರಶ್ನೆಯಾಗಿದೆ.
ಕೆಲವೇ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕ ಪಂಚಾಯತಿ ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ಎದುರಾಗಲಿರುವ ಕಾರಣ ಪಕ್ಷ ಕೈಗೊಂಡ ಈ ನಿರ್ಧಾರ ಸಂಘಟನೆ ಮೇಲೆ ಹೊಡೆತ ಬೀಳಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
1) ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು ಸಾಕ್ಷಿ ಸಮೇತ ಸಿಕ್ಕ ಕಾರಣ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಚುನಾವಣೆ ವೇಳೆ ಬೇರೆ ಪಕ್ಷದ ಝಂಡಾ ಹಿಡಿದು ಪ್ರಚಾರ ಮಾಡಿದ್ದಾರೆ. ಹೀಗಾಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಮತ್ತು ಶಾಸಕರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗಿದ.*
ಬಸರಡ್ಡಿ ಪಾಟೀಲ್ ಅನಪುರ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
2) ಐದು ವರ್ಷ ಪಕ್ಷಕ್ಕಾಗಿ ತಾನು,ಮನ, ಧನಗಳಿಂದ ದುಡಿದಿದ್ದೇನೆ. ಈ ಬಗ್ಗೆ ದಾಖಲೆಗಳು ಸಹ ಇವೆ. ಇಂದು ಅಧಿಕಾರ ಬಂದಿದೆ ಎಂಬ ಕಾರಣಕ್ಕೆ ನಮ್ಮಂಥ ನಿಷ್ಠಾವಂತರನ್ನು ಕಡೆಗಣಿಸಲಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಇ ಹಿಂದೆ ಪಕ್ಷದ ಮರ್ಯಾದೆ ಉಳಿಸಿದ್ದು ನಮ್ಮಂಥ ಕಾರ್ಯಕರ್ತರು ಎಂಬುವುದನ್ನು ನೆನಪಿಸಿಕೊಳ್ಳಿ.
ಮಾಣಿಕರಡ್ಡಿ ಕುರಕುಂದಿ. ಉಚ್ಛಾಟಿತ ಮುಖಂಡ
3) ನಾನೊಬ್ಬ ದಲಿತ ಎಂಬ ಕಾರಣಕ್ಕೆ ಪಕ್ಷದ ಕೆಲ ಮುಖಂಡರು ನನ್ನನು ಟಾರ್ಗೆಟ್ ಮಾಡುತ್ತಿದ್ದಾರೆ. ಪಕ್ಷ ವಿರೋಧಿ ಕೆಲಸ ಮಾಡಿದವರು ಬಗ್ಗೆ ನಮ್ಮಲ್ಲೂ ಸಾಕ್ಷಿಗಳಿವೆ. ಯಾದಗಿರಿ ಕಾಂಗ್ರೆಸ್ ನಲ್ಲಿ ಹುಳುಕುಗಳನ್ನು ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಎಳೆಎಳೆಯಾಗಿ ಬಿಚ್ಚಿಡಲಾಗುವುದು.
ಸಂತೋಷ ನಿರ್ಮಲಕರ್ ಎಂದ ಉಚ್ಛಾಟಿತ ಮುಖಂಡ
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ




















