ಸಿಂಧನೂರಿನ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳ(ವಾಣಿಜ್ಯ ತೆರಿಗೆಗಳ)ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್,ವಾಣಿಜ್ಯ ತೆರಿಗೆ ಇಲಾಖೆ,ನ್ಯಾಷನಲ್ ಕಾಲೇಜು ಹಾಗೂ ಸುರೇಶ ನೆಕ್ಕಂಟಿಯವರ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಗರ ಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರು ಮಾತನಾಡಿ ಪ್ರಕೃತಿ ನಮಗೆ ನೀಡಿದ ಕೊಡುಗೆ ಅಂದರೆ ನೈಸರ್ಗಿಕ ಸಂಪನ್ಮೂಲ. ನೈಸರ್ಗಿಕ ಸಂಪನ್ಮೂಲಗಳನ್ನು ಪ್ರತಿಯೊಬ್ಬರೂ ಉಳಿಸಿ ಬೆಳಸಲು ಮುಂದಾಗಬೇಕು ನೈಸರ್ಗಿಕ ಸಂಪನ್ಮೂಲ ಇವುಗಳನ್ನು ಉಳಿಸಿ ಬೆಳಸಿದಾಗ ಮಾತ್ರ ನಾವು ಜೀವಿಸಲು ಸಾದ್ಯ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಂದ ನಾವುಗಳೆಲ್ಲರೂ ಪರದಾಡಬೇಕಾಗುತ್ತದೆ. ಪ್ರತಿಯೊಬ್ಬರಿಗೂ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ ಮಣ್ಣು,ನೀರು,ಗಾಳಿ,ಸಸ್ಯಗಳು ಇನ್ನೂ ಮುಂತಾದವುಗಳು ಮನುಷ್ಯನಿಗೆ ಅತ್ಯವಶ್ಯಕವಾಗಿದೆ ಇವುಗಳನ್ನು ಉಳಿಸಿ ಬೆಳಸಲು ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಲವಾರು ವಿವಿಧ ಹಣ್ಣಿನ ಹಾಗೂ ಹೂವಿನ ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ,ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಅಧಿಕಾರಿಗಳಾದ SN ಪಾಟೀಲ,ನಗರಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರು,ಸುರೇಶ ನೆಕ್ಕಂಟಿ ಉದ್ದಿಮೆದಾರರು,ರಾಷ್ಟ್ರೀಯ ಯೋಜನಾ ಘಟಕದ ಅಧಿಕಾರಿಗಳಾದ ರವಿಕುಮಾರ ಮಸ್ಕಿ,ಸತೀಶ,ಮಲ್ಲಿಕಾರ್ಜುನ,ಸೌಮ್ಯ,ಶಂಕರಗೌಡ,ಶಿವರಾಜ,ಆನಂದ,ದುರಗಪ್ಪ,ಸೂಗಪ್ಪ,ಖಾಜಾಪಾಷಾ,
ಶರಣಮ್ಮ,ಸಾಗರ ಹಾಗೂ ನ್ಯಾಷನಲ್ ಕಾಲೇಜು ಶಿಕ್ಷಕರು,ವಿದ್ಯಾರ್ಥಿಗಳಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.