ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಹಕ್ಕುಗಳ ಸಮಿತಿ ವತಿಯಿಂದ ರಾಜ್ಯಾಧ್ಯಕ್ಷರಾದ ಅನೀಲಕುಮಾರ ಜಾಧವ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಬೀದರ್: ದಿವಂಗತ ಶ್ರೀ ಪ್ರವೀಣ ಪಗಡಲ ರವರ ಶವವು ದಿ: 25-03-2025 ರಂದು ರಾಜಮಹೇಂದ್ರವರ (ಆಂಧ್ರ ಪ್ರದೇಶ) ಹತ್ತಿರ ಅವರ ಶವವನ್ನು ಪತ್ತೆಯಾಗಿರುತ್ತದೆ, ಸದರಿಯವರ ಮರಣದ ಕುರಿತು ಭಾರತ ದೇಶದ ಎಲ್ಲಾ ಕ್ರೈಸ್ತ ಸಮುದಾಯದವರಲ್ಲಿ ತೀವ್ರ ಆಘಾತವಾಗಿದೆ. ಅವರ ಮರಣವು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ ಹಾಗೂ ಸದರಿಯವರ ಶವದ ಮರಣೋತ್ತರ ಪರೀಕ್ಷಾ ವರದಿಯ್ನೂ ಸಹ ಆಂಧ್ರ ಸರ್ಕಾರವು ಬಹಿರಂಗ ಪಡಿಸದೇ ಇರುವುದು ಸಂಶಯಕ್ಕೆ ಎಡೆಮಾಡಕೊಡುತ್ತಿದೆ. ಅದೂ ಅಲ್ಲದೇ ಸದರಿಯವರ ಮರಣವು ರಸ್ತೆ ಅಪಘಾತದಲ್ಲಿ ಸಂಭವಿಸಿದ್ದರೆ, ಅವರು ಧರಿಸಿರುವ ಹೆಲ್ಮೆಟ್‌ಗೆ ಒಂದಿಷ್ಟು ತೊರಚು ಸಹ ಆಗದೇ ಇದ್ದು, ಪೊಲೀಸರ ತನಿಖೇಯಲ್ಲಿ ಗೋಚರಿಸುವುದು ಅಸಮಂಜಸಕರವಾಗಿದೆ.
ಸದರಿ ದಿವಂಗತ ಪ್ರವೀಣ ಪಗಡಲ ಅಪೊಸ್ಟಲಿಕ್ ಆಗಿದ್ದು ಇವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಕ್ರೈಸ್ತ ಸಮಾಜದಲ್ಲಿ ಅತ್ಯಂತ ಪ್ರಭಾವ ಬೀರುವ ವ್ಯಕ್ತಿಯಾಗಿದ್ದರು, ಸದರಿಯವರಿಗೆ ಈ ಹಿಂದೆ ಸುಮಾರು ವರ್ಷಗಳಿಂದ ಜೀವದ ಬೆದರಿಕೆಗಳೂ ಸಹ ಸುಮಾರು ಸಾರಿ ಬಂದಿದ್ದವು, ಆದರೂ ಸಹ ಸದರಿಯವರು ಸತತವಾಗಿ ಅವರ ಕಾರ್ಯಗಳನ್ನು ಆಡಿಕೊಂಡು ಬರುತಿದ್ದರು, ಇದರಿಂದಾಗಿ ಸದರಿಯವರನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಆದುದರಿಂದ ಸದರಿಯವರ ಮರಣದ ಕುರಿತು ಕೇಂದ್ರ ಸರ್ಕಾರ ಆಸಕ್ತಿ ವಹಿಸಿ ಈ ಕುರಿತು ಸಿ.ಬಿ.ಐ. ವತಿಯಿಂದ ಸಮಗ್ರ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಕೂಲಂಕುಶವಾಗಿ ತನಿಖೆ ನಡೆಸಿ ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಜರುಗಿಸಿ ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ಮಣಿಪುರದಲ್ಲಿ ಬಹುದಿನಗಳಿಂದ ಕ್ರೈಸ್ತ ಸಮುದಾಯದವರ ಮೇಲೆ ಸತತ ಅತ್ಯಂತ ಹೀನಾಯಕರವಾಗಿ ಕ್ರೂರ ಅತ್ಯಾಚಾರ ಮತ್ತು ಕೊಲೆಗಳನ್ನು ಸಹ ಮಾಡಲಾಗುತ್ತಿದ್ದು ಈ ವಿಷಯದ ಕುರಿತು ಪ್ರಧಾನ ಮಂತ್ರಿಗಳು ವೈಯಕ್ತಿಕ ಮುತುವರ್ಜಿ ವಹಿಸಿ ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಹಕ್ಕುಗಳ ಸಮಿತಿ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ಘನತೆವೆತ್ತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷರಾದ ಅನೀಲಕುಮಾರ ಜಾಧವ, ಜಿಲ್ಲಾಧ್ಯಕ್ಷರಾದ ಜಗನ್ನಾಥ ಕೌಠಾ, ಬಿಶಾಪ ಸಾವನ ಪಾಲ್, ಸ್ವಾಮಿದಾಸ, ಸಂಜಯ ಜಾಗೀರದಾರ, ಅಮರ ಭಾಂಗೆ, ಉಮೇಶ, ರಾಜು ಕೊಳಾರ, ಪಾಸ್ಟರ್ ಅಬ್ರಯಾಂ, ಪಾಸ್ಟರ್ ಮನೋಜ, ಪಾಸ್ಟರ್ ಸಿ.ಎಂ. ಬರ್ಮಾ, ಪಾಸ್ಟರ್ ಪ್ರವೀಣ, ಪಾಸ್ಟರ್ ಆನಂದ, ಪಾಸ್ಟರ್ ನೊಹಾ ಮಂಜುನಾಥ್, ಪಾಸ್ಟರ್ ವಿಜಯಕುಮಾರ, ಪಾಸ್ಟರ್ ಮನೋಹರ, ಅಭಿ ಕಾಳೆ, ಅರುಣಕುಮಾರ ಆಣದೂರ, ಇಮಾನಾವೇಲ್ ಆಲ್‌ಫೇಡ, ಮೋಜಸ್ ನಿರ್ಣಾಕರ್, ರಿಚಂಡ ಸೊರಳ್ಳಿಕರ, ಇಮಾನಾವೇಲ್ ಮಂದಕನಳ್ಳಿ, ಶಾಂತಕುಮಾರ ಗುತ್ತೆದಾರ, ಪ್ರಭುದಾಸ ಸೇರಿದಂತೆ ಅನೇಕ ಕ್ರಿಶ್ಚಿಯನ್ ಮುಖಂಡರು ಉಪಸ್ಥಿತರಿದ್ದರು.

ವರದಿ: ರೋಹನ್ ವಾಘಮಾರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!