ಗಂಗಾವತಿ ತಾಲೂಕಿನಲ್ಲಿ ಸ್ವಚ್ಚತೆ ಹಾಗೂ ಮಹಾತ್ಮಾ ಗಾಂಧೀಜಿ ಅವರ ಜನ್ಮ ದಿನಾಚರಣೆ ಎಸ್.ಕೆ.ವಿ.ಎಸ್.ಕೆ ಟ್ರಸ್ಟ್ ನ ಅಡಿಯಲ್ಲಿ ನಡೆಯುತ್ತಿರುವ ಕಲ್ಮಠ ಶಿಕ್ಷಕ ತರಬೇತಿ ಸಂಸ್ಥೆ ಯಲ್ಲಿ ಭಾರತದ ಪಿತಾಮಹ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಪ್ರಯುಕ್ತ ಎನ್.ಎಸ್.ಎಸ್.ವತಿಯಿಂದ ಸ್ಚಚ್ಚತಾ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಸ್ವಚ್ಚತಾ ಅರಿವನ್ನು ಮತ್ತು ಶ್ರಮದಾನದ ಮಹತ್ವವನ್ನು ತಿಳಿಸಿ ಕೊಡುವುದರೊಂದಿಗೆ ಮಹಾತ್ಮ ಗಾಂಧಿಯವರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಶ್ರೀ ಜೆಡೆಪ್ಪ ಬಿ.ಕೆ ಹಿರಿಯ ಉಪನ್ಯಾಸಕರಾದ ಶ್ರೀಮಂಜುನಾಥ ಎಮ್. ನೂರೊಂದಯ್ಯ ಅಣ್ಣಿಗೇರಿ, ಶ್ರೀಮತಿ ಮಾಣಿಕ್ ವರ್ಣೇಕರ್,ಶ್ರೀ ದಾನನಗೌಡ ವಿದ್ಯಾರ್ಥಿಗಳು, ಹಾಗೂಬೋದಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
