ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ರೈತರು ಇಂದು ದಿನಾಂಕ 10-10-2023ರಂದು ಗ್ರಾಮದ ಹೆಸ್ಕಾಂ ಕಚೇರಿಗೆ ಮುಂದೆ ರೈತರ ಪಂಪಸೆಟಗಳಿಗೆ ಪ್ರತಿದಿನ ಕನಿಷ್ಠ 7 ತಾಸುಗಳವರೆಗೆ ಪೂರ್ಣ ಪ್ರಮಾಣದ ವಿದ್ಯುತ್ ಪೂರೈಸಬೇಕೆಂದು ಪ್ರತಿಭಟನೆ ಮಾಡಿದರು.
ಈ ವರ್ಷ ಬರಗಾಲದ ಹಿನ್ನಲೆಯಲ್ಲಿ ಮುಂಗಾರು ಬೆಳೆ ನೀರಿಲ್ಲದೆ ಸಂಪೂರ್ಣ ನೆಲಕಚ್ಚಿದೆ ಕೆಲವು ರೈತರು ಜಮೀನುಗಳಲ್ಲಿರುವ ಕೊಳವೆಬಾವಿ,ತೆರೆದ ಬಾವಿಯಿಂದಾಗಲೀ ಬೆಳೆಗಳಿಗೆ ನೀರು ಬಿಡಬೇಕೆಂದರೆ ಕೃಷಿ ಪಂಪಸೆಟಗಳಿಗೆ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ ದಿನಕ್ಕೆ ಕೊಡುವ ಕೇವಲ 2-3 ತಾಸು ನಿರಂತರವಾಗಿ ವಿದ್ಯುತ್ ಕೊಡದೆ ಮದ್ಯದಲ್ಲಿ ಕಡಿತಗೊಳಿಸಲಾಗುತ್ತಿದೆ ಹೆಸ್ಕಾಂನಿಂದ ರೈತರಿಗೆ ತೊಂದರೆಯಾಗುತ್ತಿದೆ.
ಸರ್ಕಾರ ದಿನಕ್ಕೆ ಹಗಲು ಹೊತ್ತಿನಲ್ಲಿ 4 ಘಂಟೆ ಹಾಗೂ ರಾತ್ರಿ ವೇಳೆ 3 ಘಂಟೆ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಮಾನದಲ್ಲಿ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತರೆಲ್ಲರೂ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಎಇಇ ಸಿದ್ರಾಮ ಬಿರಾದಾರ ಅವರು ರೈತರ ಮನವಿ ಸ್ವೀಕರಿಸಿ ಮಾತನಾಡಿ,ಇನ್ನು ಮುಂದೆ ಹಗಲು ಹೊತ್ತಿನಲ್ಲಿ ತ್ರಿಫೇಸ್ 4 ತಾಸು ಹಾಗೂ ರಾತ್ರಿ ಸಮಯದಲ್ಲಿ ತ್ರಿಫೇಸ್ 3 ತಾಸು ಹಾಗೂ ಸಂಜೆ 7 ಗಂಟೆಯಿಂದ 9 ರವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದರು. ಈ ಭರವಸೆ ಮೇರೆಗೆ ರೈತರು ಪ್ರತಿಭಟನೆ ಹಿಂಪಡೆದರು.
ಮನಗೂಳಿ ಶಾಖಾಧಿಕಾರಿ ಪರಶುರಾಮ ಉಕ್ಕಲಿ, ಸಿ.ಎಸ್.ರೆಡ್ಡಿ ಗ್ರಾಮದ ರೈತರಾದ ಬಾಳು ಮಸಳಿ, ಅಶೋಕ ಇಂಡಿ,ಅಪ್ಪುಗೌಡ ಬಿರಾದಾರ,ರಾಹುಲ ಕಲಗೊಂಡ,ವಿಶ್ವನಾಥ ತಡಲಗಿ,ಅಶೋಕ ಹಾವಿನಾಳ,ಸುರೇಶ ಇಟ್ಟಂಗಿಹಾಳ,ಶೇಟ್ಟೆಪ್ಪ ಅಪ್ಪಣಗೊಳ,ಹುಸೇನಬಾಷಾ ಮಕಾನಂದಾರ, ಮುತ್ತಪ್ಪ ನಂದಿ,ಮುದಕು ಗುಬ್ಬಿ,ಕಾಸಪ್ಪಾ ಸಿಂದಗಿ, ಸಂತುಗೌಡ ಇಂಡಿ,ಯಲ್ಲಪ್ಪ ಲೊಡಗಾ,ಮುಬಾರಕ ಪಟೇಲ,ರಾಜು ಮಸಳಿ,ಬಸು ಬಡಿಗೇರ ಇನ್ನುಳಿದ ಗ್ರಾಮದ ರೈತರು ಉಪಸ್ಥಿತರಿದ್ದರು.
