ಹನೂರು:ಜಿಲ್ಲಾ ಪಂಚಾಯತಿ ಚಾಮರಾಜನಗರ, ತಾಲೂಕು ಪಂಚಾಯತಿ ಹನೂರು,ನೆಹರು ಯುವ ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಂ.ಆರ್.ಮಂಜುನಾಥ್
ದೆಹಲಿಯ ಕರ್ತವ್ಯ ಪಥ್ ಇಂಡಿಯಾ ಗೇಟ್ ನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಮೃತವಾಟಿಕ ಮತ್ತು ಅಜಾದಿ ಕಾ ಅಮೃತ ಮಹೋತ್ಸವ ಸ್ಮಾರಕ ನಿರ್ಮಾಣಕ್ಕಾಗಿ ದೇಶದ ಪ್ರತಿ ಮನೆಯಿಂದ ಅಮೃತ ಕಳಸದಲ್ಲಿ ಮಣ್ಣು ಮತ್ತು ಅಕ್ಕಿಯನ್ನು ಸಂಗ್ರಹಿಸಲಾಗುತ್ತಿದ್ದು,ನಮ್ಮ ಹನೂರು ತಾಲ್ಲೂಕು ಸೇರಿದಂತೆ ದೇಶದ ಪ್ರತಿ ಹಳ್ಳಿಗಳಿಂದ ಮಣ್ಣು ಸಂಗ್ರಹಿತ್ತಿರುವುದು ಹೆಮ್ಮೆಯ ವಿಚಾರ ಎಂದರು.
ದೇಶದಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರಕಕ್ಕೆ ಮಣ್ಣು ಮತ್ತು ಅಕ್ಕಿ ಸಂಗ್ರಹಿಸುತ್ತಿರುವ ಈ ಅಭಿಯಾನದಲ್ಲಿ ಹನೂರು ತಾಲೂಕಿನ ಜನರಾದ ನಾವೆಲ್ಲರೂ ಭಾಗವಹಿಸುತ್ತಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ.
ಸ್ವತಂತ್ರ ಅಮೃತ ಮಹೋತ್ಸವವನ್ನು ನಮ್ಮ ದೇಶದ ಮುಂದಿನ ಪೀಳಿಗೆಗಳು ನೆನಪಿನಲ್ಲಿಟ್ಟುಕೊಳ್ಳುವ ಸಲುವಾಗಿ ಮತ್ತು ದೇಶದ ಬಗ್ಗೆ ಅಭಿಮಾನ ಮತ್ತು ಪ್ರೀತಿಯನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ಕಿರಣ ಪಡನೇಕರ್,ಇ ಒ ಉಮೇಶ್,ಪಟ್ಟಣ ಪಂಚಾಯತಿ ಸದಸ್ಯರಾದ ಮಂಜುಳಾ,ಸುದೇಶ್,ಗಿರೀಶ್,ಸಹಾಯಕ ನಿರ್ದೇಶಕ ರವೀಂದ್ರ,ತಾಲೂಕಿನ ಎನ್.ಆರ್.ಎಲ್.ಎಂ ಮಹಿಳಾ ಸಂಘದ ಪ್ರತಿನಿಧಿಗಳು ಭಾಗವಹಿಸಿದರು.
ವರದಿ ಉಸ್ಮಾನ್ ಖಾನ್




















