ಮುಂಡಗೋಡ:ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಶೌರ್ಯ ಜಾಗರಣ ರಥಯಾತ್ರೆಯನ್ನು ಮುಂಡಗೋಡದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.
ನಗರದ ಮಾರಿಕಾಂಬಾ ದೇವಸ್ಥಾನದಿಂದ ಪ್ರಾರಂಭವಾದ ರಥಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಿವಾಜಿ ಸರ್ಕಲ್ ಮೂಲಕ ಲಮಾಣಿ ತಾಂಡದ ಸೇವಾಲಾಲ್ ದೇಗುಲದ ಬಳಿಯ ಪಂಚಮುಖಿ ಆಂಜನೇಯ ಬಳಿ ಸಮಾರೋಪ ಗೊಂಡಿತು ಈ ವೇಳೆ ನಗರದ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.




















