ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.ಪ್ರಕೃತಿಯೇ ಸ್ವರ್ಗ ಎನ್ನಿಸುವಷ್ಟು ಹಸಿರಿನಿಂದ ಮೈದುಂಬಿಕೊಂಡು ಸೃಷ್ಟಿಯ ಅದ್ಭುತಕ್ಕೆ ಸಾಕ್ಷಿಯಾದ ಕಪ್ಪು ಮಣ್ಣಿನ ನಾಡು ನಮ್ಮ ಕರುನಾಡು ಕರ್ನಾಟಕ ಎಂದರೆ ಒಂದು ಸಂಸ್ಕೃತಿ ವಿಶ್ವವೇ ಬೆರಗಾಗಿ ನೋಡುತ್ತಿರುವ ಪರಂಪರೆಯ ಸೊಬಗು,ಕರುನಾಡು ಭಾವೈಕ್ಯತೆಯ ಬೀಡು,ಈ ನಾಡಿನಲ್ಲಿ ಹುಟ್ಟುವುದೇ ಪುಣ್ಯ,ಈ ನಾಡಿನ ಮಣ್ಣಿನಲ್ಲಿ ಕರುಣೆ ಇದೆ,ಪಾವಿತ್ರ್ಯತೆ ಇದೆ, ಶಕ್ತಿ ಇದೆ.
ಶತಮಾನದಿಂದ ಹಂಚಿ ಹೋಗಿದ್ದ ನಮ್ಮ ಕರ್ನಾಟಕ ಒಂದು ಗೂಡಿ ವಿಶಾಲ ಮೈಸೂರು ರಾಜ್ಯ ಉದಯವಾಗಿ 1973 ನವೆಂಬರ್ 1 ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಯಿತು. ನಮ್ಮ ಕನ್ನಡಕ್ಕೆ ಸಾವಿರ ವರ್ಷಗಳ ಇತಿಹಾಸ ಇದೆ.
ಕನ್ನಡದ ಸಾಹಿತ್ಯ ಪರಂಪರೆ,ಇತಿಹಾಸ, ಸಂಸ್ಕೃತಿ,ಕಾವ್ಯ ಆಚಾರ ವಿಚಾರ ನಮ್ಮ ಕನ್ನಡದ ಹಿರಿಮೆ,ಸಾಧು,ಸಂತರು,ದಾಸರು,ಶಿವ ಶರಣರು, ಕವಿಗಳು ನಮ್ಮ ನಾಡಿನ ಹೆಮ್ಮೆ ಕನ್ನಡದ ಹೆಮ್ಮೆ. ಜಗತ್ತಿನಲ್ಲಿ ಎಲ್ಲಿಯೂ ಇರದ ಶಿಲ್ಪಕಲೆ ನಮ್ಮ ನಾಡಿನಲ್ಲಿದೆ.
ನಮ್ಮ ಕನ್ನಡ ಪರಿಪೂರ್ಣ ಭಾಷೆ,
ನಮ್ಮ ಕನ್ನಡ ಕನ್ನಡಿಗರ ಮಾತೃ ಭಾಷೆ ಕರ್ನಾಟಕದ ರಾಜ್ಯ ಭಾಷೆ.
ನಾವು ಮಾತನಾಡುದ್ದನ್ನ ಬರೆಯಬಹುದು , ಬರೆದದ್ದನ್ನು ಓದಬಹುದಾದ ಒಂದು ಸುಂದರ ವಿಶಿಷ್ಟ ಭಾಷೆ.ನಮ್ಮ ಕನ್ನಡ ಭಾಷೆ ಕೇವಲ ಒಂದು ಭಾಷೆಯಲ್ಲ ಅದು ಕನ್ನಡಿಗರ ಭಾವನೆ ಯೋಚನೆ ಮಾಡುವ ರೀತಿ.
ನಮ್ಮ ಕನ್ನಡ ಭಾಷೆ ಜಗತ್ತಿನ ನಾಲ್ಕುವರೆ ಸಾವಿರ ಭಾಷೆಗಳಲ್ಲಿ ಅತ್ಯಂತ ಶ್ರೀಮಂತ ಭಾಷೆ ಭಾರತದ ಪುರಾತನ ಭಾಷೆಗಳಲ್ಲಿ ಒಂದು ನಮ್ಮ ಕನ್ನಡ. ಕನ್ನಡ ಭಾಷೆ ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರ್ಕಾದಿಂದ ಪಡೆದಿದೆ. ನಮ್ಮ ಭಾರತದ ಶಾಸ್ತ್ರೀಯ ಸ್ಥಾನಮಾನ ಪಡೆದ 3ನೇ ಭಾಷೆ ನಮ್ಮ ಕನ್ನಡ ವೈಜ್ಞಾನಿಕವಾಗಿ ಅತ್ಯಂತ ಸ್ಪಷ್ಟತೆ ಇರೋ ಭಾಷೆ.
ಕನ್ನಡ ಲಿಪಿಯನ್ನು ಆಚಾರ್ಯ ವಿನೋಬಾ ಭಾವೆಯವರು “ಜಗತ್ತಿನ ಲಿಪಿಗಳ ರಾಣಿ”ಎಂದು ಕರೆದಿದ್ದಾರೆ ಅಂತಹ ಸುಂದರ ಭಾಷೆಯ ನಾಡು ನಮ್ಮದು ಇಂತಹ ಪುರಾತನ ಇತಿಹಾಸ ಸಂಸ್ಕೃತಿ ಇರುವ ನಮ್ಮ ಕನ್ನಡ ನಮ್ಮಿಂದ ದೂರವಾಗಿ ಇಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜಾಗೃತವಾಗಬೇಕಿದೆ ಇಂದಿನ ಯುವ ಜನಾಂಗ ಕನ್ನಡ ಬಗ್ಗೆ ಕೀಳರಿಮೆ ಇಂದ ನಿತ್ಯ ಜೀವನದಲ್ಲಿ ಕನ್ನಡವು ದೂರ ಉಳಿಯುವಂತಾಗಿದೆ ಕನ್ನಡಿಗರಿಂದಲೇ ಕನ್ನಡಕ್ಕೆ ಭಯವಾಗುತ್ತಿದೆ ಕನ್ನಡಿಗರೇ ಕನ್ನಡಕ್ಕೆ ಇಂದು ಶತ್ರುಗಳಾಗಿಬಿಡಬಹುದು ಎರಡೂವರೆ ಸಾವಿರ ವರ್ಷದಿಂದ ಉಳಿದ ನಮ್ಮ ಕನ್ನಡ ಇಂದು ಮರುಗುತ್ತಿದೆ ಕನ್ನಡಿಗರು ಮನಸ್ಸು ಮಾಡಿದರೆ ಮಾತ್ರ ಉಳಿಸಬಹುದಾದ ಸ್ಥಿತಿಗೆ ಬಂದಿದೆ ಜ್ಞಾನ ಸಂಪಾದನೆಗೆ ಬೇರೆ ಭಾಷೆ ಬೇಕು ಅಷ್ಟೇ ನಮ್ಮ ಕನ್ನಡ ಉಳಿಸುವುದು ನಮ್ಮ ಕರ್ತವ್ಯವಾಗಿದೆ.
ನಮ್ಮ ಭಾಷೆ ನಮ್ಮ ನಾಡಿನ ಬಗ್ಗೆ ಹೆಮ್ಮೆ ಇರಲಿ. ಎಂದೂ ನಾವು ನಮ್ಮ ಭಾಷೆಯನ್ನು ಬಿಟ್ಟು ಕೊಡದೆ ಗೌರವಿಸಿ ಉಳಿಸಬೇಕಿದೆ ನಿತ್ಯ ಜೀವನದಲ್ಲಿ ಕನ್ನಡವನ್ನು ಬಳಸಬೇಕು ಮತ್ತೊಮ್ಮೆ ಕನ್ನಡದ ಬಗ್ಗೆ ಹೆಮ್ಮೆ ಮತ್ತು ಗೌರವ ಇರಲಿ ಎಂದು ಹೇಳುವೆ ಇದು ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಉತ್ಸವವಾಗಿ ರಾರಾಜಿಸಬೇಕು ಕನ್ನಡವನ್ನು ಬಳಸಬೇಕು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಗೌರವ ಇರಲಿ. ಕನ್ನಡವನ್ನು ಉಳಿಸೋಣ ಕನ್ನಡವನ್ನು ಬೆಳೆಸೋಣ.
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ ಕಸ್ತೂರಿ ಕನ್ನಡ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡವೇ ಸತ್ಯ ಕನ್ನಡವೇ ನಿತ್ಯ.
-ಮಾನಸ.ಎಂ.ಸೊರಬ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.