ನಾಲಿಗೆಯಲ್ಲಿ ನಲಿಯುವ ನಮ್ಮೂರ ನುಡಿ
ಸುಲಲಿತವಾದ ಕನ್ನಡ ಭಾಷೆ ಜೇನ್ನುಡಿ
ನಾಟ್ಯದ ಉತ್ತುಂಗ ಶಿಖರವೇ ಭಾವ
ಸುಲಭವಾದ ಅರ್ಥಗರ್ಭಿತ ಪದಗಳೇ ಜೀವ
ಕರುನಾಡಿಗೆ ಕಂಪು ಸೂಸುವ ಹಿತನುಡಿ
ನವಿಲ ಮೈಮಾಟದಂತೆ ಸೊಬಗೇ ನಾಡಿ
ಕಜ್ಜಾಯದಂತ ಮಧುರತೆ ನೀಡುವ
ಕಾವ್ಯಕ್ಕೆ ವಿಜೃಂಭಣೆ ಗಳಿಸಿಕೊಡುವ
ನಮ್ಮ ನಡೆನುಡಿಗೂ ಸಹಕಾರಿಯಾಗುವ
ಕಂಪನ್ನು ಸೂಸಿ ಮೆರೆಯುವ.
✍️ ದೇವರಾಜು ಬಿ ಎಸ್ ಹೊಸಹೊಳಲು.
ಕಾವ್ಯನಾಮ:ಅರಸು