ಗಂಗಾವತಿ:ತಾಲೂಕಿನ ಹೊಸಕೆರಾ ಕ್ಯಾಂಪಿನ ಅಂಗನವಾಡಿ ಶಾಲೆಯಲ್ಲಿ ಕನ್ನಡಾಂಬೆಯ ರಂಗೋಲಿ ಚಿತ್ರ ಬಿಡಿಸುವುದರೊಂದಿಗೆ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯರು ಜ್ಯೋತಿ ಬೆಳಗಿಸಿ, ಮಕ್ಕಳಿಗೆ ವೇಷ ಭೂಷಣ ಧರಿಸಿ, ಕರ್ನಾಟಕ 50ರ ಸಂಭ್ರಮದ ರಾಜ್ಯೋತ್ಸವವನ್ನು ಪುಟಾಣಿ ಮಕ್ಕಳೊಂದಿಗೆ ಸಂಭ್ರಮದಿಂದ ಆಚರಿಸಿದರು, ನಂತರ ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ಪುಷ್ಪವತಿ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.[೩] ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ, ಮತ್ತು ವಿಶ್ವದಾ ದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ರಾಜ್ಯದಲ್ಲಿ 68 ಸಾಧಕರಿಗೆ, ಹತ್ತು ಸಂಘ ಸಂಸ್ಥೆಗೆ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುತ್ತದೆ, ಅದರಲ್ಲಿ ನಮ್ಮ ಕೊಪ್ಪಳ ಜಿಲ್ಲೆಯ ಮೂರು ಜನಕ್ಕೆ ಪ್ರಶಸ್ತಿ ಮಡಲಿಗೇರಿದೆ ಎಂದರು, ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯರಾದ ಶ್ರೀಮತಿ ಮಾಂತಮ್ಮ. ಪುಷ್ಪಾವತಿ. ಮೋನಿಕಾ. ಶಿವಮ್ಮ. ಸುಜಾತಾ. ನೇತ್ರಾವತಿ. ಮಹಾದೇವಿ ಸಹಾಯಕಿಯರಾದ ಶ್ರೀಮತಿ ಸುಲೋಚನಾ. ಹಾಲಿಂಬಿ. ನಾಗಮ್ಮ. ಖಾಜಮ್ಮ ಭಾಗಿಯಾಗಿ ಪುಟಾಣಿ ಮಕ್ಕಳೊಂದಿಗೆ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಆಚರಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.