ಮುಂಡಗೋಡ:ಇತ್ತೀಚಿಗೆ ಭಾರಿ ಸದ್ದು ಮಾಡಿದ್ದ ಮುಂಡಗೋಡದ ಟಿಂಬರ್ ಡಿಪೋ ಹಗರಣ )ದ ಕೇಸ್ ಸದ್ದಿಲ್ಲದೆ ಮುಚ್ಚುವ ಹಂತಕ್ಕೆ ಬಂದಿದೆಯಾ ಎಂಬ ಭಾರೀ ಅನುಮಾನ ಮುಂಡಗೋಡ ಜನರಲ್ಲಿ ಮೂಡಿದೆ,ಅರಣ್ಯ ಜಿಲ್ಲೆ ಎನಿಸಿಕೊಂಡಿರೋ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನ ಅಡಿಗೆ ಒಲೆಗಾಗಿ ಕಟ್ಟಿಗೆ ಕಡಿದರೂ ಕೇಸ್ ದಾಖಲಿಸುವ ಫಾರೆಸ್ಟ್ ಸಿಬ್ಬಂದಿಗಳು ಅಧಿಕಾರಿಗಳು ಈಗ ಇಲಾಖೆಯಲ್ಲಿರೋ ಅಧಿಕಾರಿಗಳೇ ಇಂತಹ ಪ್ರಕರಣದಲ್ಲಿ ಭಾಗಿಯಾಗಿರೋದು ಇಲಾಖೆಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆದು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕಿದೆ,ಆದರೆ ನಾಟಗಳನ್ನು ಅಕ್ರಮವಾಗಿ ಮುಂಡಗೋಡ ಡಿಪೋದಿಂದ ಲಾರಿ ಮೂಲಕ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ 5 ಜನ ಆರ್,ಎಫ್,ಓ ಗಳನ್ನ 6 ತಿಂಗಳ ಕಾಲ ಅಮಾನತ್ತು ಮಾಡಲಾಗಿದೆ ಆದರೂ ಅಮಾನತು ಅವಧಿ ಮುಗಿದ ಬಳಿಕ ಅವರೆಲ್ಲರೂ ಮತ್ತೆ ಸೇವೆಗೆ ಸೇರಿಕೊಳ್ಳುತ್ತಾರೆ ಇಲ್ಲವೇ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಇದೆ ಸಾರ್ವಜನಿಕರು ಒಂದು ತುಂಡು ಮರವನ್ನು ಕಾಡಿನಲ್ಲಿ ಕಡಿದರೆ ಮರು ದಿನ ಪೇಪರ್ ನಲ್ಲಿ ದೊಡ್ಡದಾಗಿ ಹೆಡ್ ಲೈನ್ ಹಾಕಿಸುವ ಅರಣ್ಯ ಇಲಾಖೆ ಅಧಿಕಾರಿಗಳು ಯಾಕೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಇಲಾಖೆಯ ದ್ವಂದ್ವ ನೀತಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ ಟಿಂಬರ್ ಡಿಪೋದ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಕರಣದ ರೂವಾರಿ ಕಚೇರಿ ಗುಮಾಸ್ತನನ್ನು ಆಗಿನ ACF ಆಗಿದ್ದ ರವಿ ಎಂ ಹುಲ್ಕೊಟಿ ಅವರು ಕಾತುರ ವಲಯ ಕಚೇರಿಗೆ ವರ್ಗಾವಣೆ ಮಾಡಿದ್ದರು ಆದರೆ ತನ್ನ ರಾಜಕೀಯ ಪ್ರಭಾವ ಬಳಸಿ ಹಿರಿಯ ಅಧಿಕಾರಿಗಳು ವರ್ಗಾವಣೆ ಆದೇಶ ಹೊರಡಿಸಿದ್ದರು ಕಾತುರ ವಲಯ ಕಚೇರಿಗೆ ಹೋಗಿ ಚಾರ್ಜ್ ತೆಗೆದುಕೊಳ್ಳದ ಟಿಂಬರ್ ಡಿಪೋ ದ ಗುಮಾಸ್ತ ಮಹಾಶಯ,ಇಲ್ಲ ಸಲ್ಲದ ನೆಪ ಹೇಳಿ ಮುಂದೂಡುತ್ತಿದ್ದಾನೆ ಎಂದು ಹಿರಿಯ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ,ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕರುನಾಡ ಕಂದ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ವಸಂತ ರೆಡ್ಡಿ ಅವರು ಇಲಾಖೆ ಹಂತದ ವಿಚಾರಣೆ ಪ್ರಗತಿಯಲ್ಲಿದ್ದು,ಅಂತಿಮ ಆದೇಶಕ್ಕೆ ಕಾಯಲಾಗುತ್ತಿದೆ,ಆದರೆ ಟಿಂಬರ್ ಡಿಪೋ ಗುಮಾಸ್ತನನ್ನು ಕೆಲವೇ ದಿನಗಳಲ್ಲಿ ಆದೇಶದ ಪ್ರಕಾರ ವರ್ಗಾವಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.ಇದಕ್ಕೂ ಮೊದಲು ಮಾತನಾಡಿದ ಯಲ್ಲಾಪುರ ವಲಯದ DFO ಎಸ್ ಜಿ ಹೆಗಡೆ ಅವರು ಈ ಕುರಿತು ಇನ್ನೂ ಎರಡು ಮೂರು ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಅರಣ್ಯ ಇಲಾಖೆಯ ಈ ಟಿಂಬರ್ ಡಿಪೋ ಹಗರಣ ನೋಡಿ ಸಾರ್ವಜನಿಕರು ಜನರಿಗೊಂದು ನ್ಯಾಯ ಅಧಿಕಾರಿಗಳಿಗೊಂದು ನ್ಯಾಯ ಎಂದು ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.