ಕೊಪ್ಪಳ:ನಗರದ ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ಶನಿವಾರದಂದು 8ನೇ ಆಯುರ್ವೇದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಆಲ್ ಇಂಡಿಯನ್ ಇನ್‌ಸ್ಟಿಟ್ಯೂಶನ್ ಆಫ್ ಆಯುರ್ವೇದ ಮೆಡಿಕಲ್, ದೆಹಲಿ ಅವರಿಂದ ಉಚಿತವಾಗಿ 5000 ಬಾಲರಕ್ಷ ಕಿಟ್(ಸುವರ್ಣ ಬಿಂದು ಪ್ರಾಶನ ದಿವಸ) ವಿತರಣೆ ಅಂಗವಾಗಿ ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ ಅವರು ಸಾಂಕೇತಿಕವಾಗಿ ಮಕ್ಕಳಿಗೆ 10 ಕಿಟ್‌ಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಿ.ಎಸ್.ಸವಡಿ,ಬಾಲರಕ್ಷ ವಿಭಾಗದ ಮುಖ್ಯಸ್ಥರಾದ ಗವಿಸಿದ್ದನಗೌಡ ಪಾಟೀಲ್,ಸಂಶೋಧನಾ ಮುಖ್ಯಸ್ಥರಾದ ವೀರಯ್ಯ ಹಿರೇಮಠ,ಹಿರಿಯ ವೈದ್ಯರಾದ ಕುಮಾರಸ್ವಾಮಿ ಹಿರೇಮಠ,ವೈದ್ಯರಾದ ಸೂರ್ಯನಾರಾಯಣ, ಮಹಾವಿದ್ಯಾಲಯದ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು,ಮಕ್ಕಳು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.