ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಲಯದಲ್ಲಿ ಸ್ವಾಮಿ ವಿವೇಕನಂದರ ಜಯಂತಿ ಆಚರಣೆ ಮಾಡಲಾಯಿತು.
ಈ ವೇಳೆಯಲ್ಲಿ ಸ್ವಾಮಿವಿವೇಕನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪಿ.ರಾಘವೇಂದ್ರ, ರೈತರಾದ ಹೆಚ್.ಎಂ.ಗವಿಸಿದ್ದಯ್ಯಸ್ವಾಮಿ ಹೆಬ್ಬಾಳ, ಟಿ.ಹನುಮಂತಪ್ಪ,ದೊಡ್ಡನಗೌಡ,ನಿಂಗಪ್ಪ, ಸಿಬ್ಬಂದಿಯಾದ ಎಂ.ಪಿ.ಪಂಪನಗೌಡ,ಮಂಜುನಾಥ, ಹನುಮೇಶ,ನಾಗರಾಜ ಇದ್ದರು.
